ಹೆಚ್ಚುತ್ತಿರುವ ಮಕ್ಕಳ ಸಾವಿನ ಪ್ರಮಾಣ

– ಕೆ.ಟಿ.ರಗು (ಕೆ.ಟಿ.ಆರ್)Dead roseಬಾರತದಲ್ಲಿ ಜನಸಂಕ್ಯೆ ಅದಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಬಾರತದ ಸಮಾಜ, ಆರ‍್ತಿಕತೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ಬಾರತದಲ್ಲಿ ಮಕ್ಕಳ ಸಾವಿನ ಸಂಕ್ಯೆ ದಿನೇ ದಿನೇ ಏರುತ್ತಿರುವುದು ಶೋಚನೀಯ ಸಂಗತಿ.

  • ವಿಶ್ವದಲ್ಲೇ ಅತ್ಯಂತ ಹೆಚ್ಚು ಮಕ್ಕಳು (ಸುಮಾರು 40 ಕೋಟಿ) ಬಾರತದಲ್ಲಿದ್ದಾರೆ. ಆದರೆ ಇವರ ಪೈಕಿ 50% ಮಕ್ಕಳು ಅಪೌಶ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಸುಮಾರು 50% ಮಕ್ಕಳು ಶಾಲೆಯ ಕಡೆ ಮುಕ ಮಾಡುತ್ತಿಲ್ಲ. ಇದು ವಿಶ್ವದಲ್ಲೇ ಅತ್ಯಂತ ಯುವ ಜನಸಂಕ್ಯೆ ಹೊಂದಿರುವ ಬಾರತದ ಸ್ತಿತಿ.
  • ವಿಶ್ವಾದ್ಯಂತ ಮಕ್ಕಳ ಸಾವಿಗೆ ಇರುವ ಕಾರಣಗಳಲ್ಲಿ ಮುಕ್ಯವಾದವು ವಾಂತಿಬೇದಿ.  ಇದಕ್ಕೆ ಕಾರಣ ರೋಟ ವೈರಸ್. ಉತ್ತಮ ಶೌಚಾಲಯ ವ್ಯವಸ್ತೆ ಇಲ್ಲದಿರುವುದರಿಂದ ಪ್ರತಿ ವರ‍್ಶ ಬಾರತದಲ್ಲಿ ಸುಮಾರು 50,000 ಕ್ಕಿಂತಲೂ ಅದಿಕ ಮಕ್ಕಳು ಈ ಹೆಮ್ಮಾರಿ ವೈರಸ್‍ಗೆ ಅಸುನೀಗುತ್ತಿದ್ದಾರೆ.
  • ದೇಶದಲ್ಲಿ ಸಾಯುವ ಐದು ವರ‍್ಶಕ್ಕಿಂತ ಕೆಳಗಿನ ಮಕ್ಕಳ ಸಂಕ್ಯೆ 2012 ರಲ್ಲಿ 100ಕ್ಕೆ 56 ಇತ್ತು. 1990ರಲ್ಲಿ 28.5 ಲಕ್ಶ (21%) ಐದು ವರುಶಕ್ಕಿಂತ ಕೆಳಗಿನ ಮಕ್ಕಳು ಅಸುನೀಗಿದ್ದಾರೆ.

ಬಾರತ ಸರ‍್ಕಾರವು ಇದನ್ನು ತಡೆಯುವ ಸಲುವಾಗಿ ರಾಶ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್ (ಎನ್‍ಆರ್‍ಹೆಚ್‍ಎಂ) ಮುಂತಾದ ಯಶಸ್ವಿ ಕಾರ‍್ಯಕ್ರಮಗಳನ್ನು ರೂಪಿಸಿ ಶಿಶು ಮತ್ತು ಹೆರಿಗೆ ಸಾವುಗಳನ್ನು ಕಡಿಮೆ ಮಾಡಿದೆ. ಆದರೆ ಇದು ನಿಗದಿತ ಗುರಿಗಿಂತ ಬಳಹ ಕಡಿಮೆ ಸಾದಿಸಿದೆ. ಈ ನಿಟ್ಟಿನಲ್ಲಿ ಸರ‍್ಕಾರ ಇನ್ನು ಹೊಸ ಹೊಸ ಆರೋಗ್ಯ ಸುದಾರಣಾ ಕಾರ‍್ಯಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳ ಸಾವಿನ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ ಪರೋಕ್ಶವಾಗಿ ಜನನ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.

(ಚಿತ್ರ ಸೆಲೆ: wikimedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: