ಮುಂಗಾರು ಮಳೆಗೆ ಬಿಸಿ ಬಿಸಿ “ಮೆಣಸು – ಕೋಳಿ”

– ಮದು ಜಯಪ್ರಕಾಶ್.Koli

ಬೇಕಾಗುವ ಪದಾರ‍್ತಗಳು:
1/2 ಕೆಜಿ ಕೋಳಿ, 3 ರಿಂದ 4 ಕಾರ ಇರುವ ಹಸಿ ಮೆಣಸಿನಕಾಯಿ (ಚಿಕ್ಕ ಮೆಣಸಿನಕಾಯಿ), 1 ದಪ್ಪ ಮೆಣಸಿನಕಾಯಿ, 1 ದೊಡ್ಡ ಈರುಳ್ಳಿ, 1/2 ಚಮಚ ಗರಂ ಮಸಾಲೆ, 1 ರಿಂದ 2 ಚಮಚ ಟಮೊಟೊ ಸಾಸ್, 1 ಚಮಚ ವೆನಿಗರ್, 1/2 ಚಮಚ ಕಪ್ಪು ಮೆಣಸಿನಪುಡಿ, 1 ರಿಂದ 2 ಸೋಯಾ ಸಾಸ್ ಹನಿಗಳು, 2 ಚಮಚ ಶುಂಟಿ-ಬೆಳ್ಳುಳ್ಳಿ ಪೇಸ್ಟ್, 3 ರಿಂದ 4 ಚಮಚ ಎಣ್ಣೆ, ರುಚಿಗೆ ತಕ್ಕಶ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ಬಗೆ:
ಬಾಣಲೆಯಲ್ಲಿ 3 ರಿಂದ 4 ಚಮಚ ಎಣ್ಣೆ ಹಾಕಿ, ಉದ್ದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಉದ್ದಕ್ಕೆ- ತೆಳ್ಳಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿದುಕೊಳ್ಳಿ. ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಬಳಿಕ ಉದ್ದಕ್ಕೆ ಕತ್ತರಿಸಿದ ದಪ್ಪ ಮೆಣಸಿನಕಾಯಿಯನ್ನು ಹಾಕಿ ಹುರಿಯುತ್ತಾ, ತೊಳೆದ ಕೋಳಿ ಮಾಂಸವನ್ನು ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಸುಮಾರು 10 ನಿಮಿಶ ಹುರಿಯಿರಿ. ಮಾಂಸ ಸ್ವಲ್ಪ ಬೆಂದ ಮೇಲೆ, ಮೆಣಸಿನ ಪುಡಿ ಮತ್ತು ಗರಂ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಮುಚ್ಚಳವನ್ನು ಮುಚ್ಚಿ ಸುಮಾರು 15 ನಿಮಿಶ ಬೇಯಲು ಬಿಡಿ.

ಕೊನೆಯಲ್ಲಿ ಬೆಂದ ಕೋಳಿಗೆ ರುಚಿಗೆ ತಕ್ಕಶ್ಟು ಉಪ್ಪು, ಟಮೋಟೋ ಸಾಸ್ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮುಚ್ಚಳ ಮುಚ್ಚಿ ಸುಮಾರು 5 ನಿಮಿಶ ಬೇಯಿಸಿ. ಮಾಂಸ ಪೂರ‍್ತಿ ಬೆಂದ ಮೇಲೆ ಸೋಯಾ ಸಾಸ್ ಮತ್ತು ವೆನಿಗರ್ ಅನ್ನು ಹಾಗಿ ಕಲಸಿ. ಈಗ ಮುಂಗಾರು ಮೆಣಸು – ಕೋಳಿ ರೆಡಿ. ಸಿಂಗಾರಕ್ಕೆ ಮೇಲೆ ಕೊಂಚ ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ಅಶ್ಟೆ. ಮುಂಗಾರು ಮಳೆ ಬಿದ್ದಾಗ, ಚಳಿಚಳಿ ಆದಾಗ ಬಿಸಿ ಬಿಸಿ ಮೆಣಸು – ಕೋಳಿ ಜಮಾಯಿಸಿ!

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಕಳೆದ ವಾರ ಮೆಣಸು ಕೋಳಿ ಮಾಡಿದ್ದೆ. ತುಂಬಾ ಚೆನ್ನಾಗಿತ್ತು. ನನ್ನಿ

ಅನಿಸಿಕೆ ಬರೆಯಿರಿ: