ಬಹುಬಳಕೆಯ ಮೊಟ್ಟೆ ಗೊಜ್ಜು

– ಮದು ಜಯಪ್ರಕಾಶ್.

motte

 

ಬೇಕಾಗುವ ಪದಾರ‍್ತಗಳು:
4 ಬೇಯಿಸಿದ ಮೊಟ್ಟೆ, 1 ಈರುಳ್ಳಿ, 2 ಟಮೋಟೋ, 1/2 ಚಮಚ ಗರಂ ಮಸಾಲೆ, 1 ಚಮಚ ದನಿಯ ಪುಡಿ, 1 ಚಮಚ ಒಣಮೆಣಸಿನಕಾಯಿ ಪುಡಿ, 1/4 ಚಮಚ ಕರಿಮೆಣಸಿನ ಪುಡಿ, 3-4 ಹಸಿರು ಮೆಣಸಿನಕಾಯಿ, 1 ಗೋಲಿ ಗಾತ್ರದ ಹುಣಸೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು, 1/4 ಚಮಚ ಅರಿಶಿಣದ ಪುಡಿ, 3-4 ಚಮಚ ಎಣ್ಣೆ, 2 ಚಮಚ ಶುಂಟಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಶ್ಟು ಉಪ್ಪು.

ಮಾಡುವ ಬಗೆ:
ಬಾಣಲೆಯಲ್ಲಿ ಎಣ್ಣೆ, ಒಣಮೆಣಸಿನಕಾಯಿ ಪುಡಿ, ಸ್ವಲ್ಪ ಉಪ್ಪು ಮತ್ತು ಎಲ್ಲ ಬೇಯಿಸಿದ ಮೊಟ್ಟೆಗಳನ್ನು 5 ನಿಮಿಶಗಳ ವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಬೇಯುವವರೆಗೆ ಹುರಿಯಿರಿ. ಬಳಿಕ ಟಮೋಟೋಗಳನ್ನು ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ಹಾಕಿ. ಬಳಿಕ ಅರಿಶಿಣದ ಪುಡಿ, ಗರಂ ಮಸಾಲೆ, ದನಿಯ ಪುಡಿ, ಕರಿಮೆಣಸಿನ ಪುಡಿ, ಹುಣಸೆಹಣ್ಣಿನ ರಸ, ರುಚಿಗೆ ತಕ್ಕಶ್ಟು ಉಪ್ಪು – ಈ ಎಲ್ಲವನ್ನೂ ಹಾಕಿ ಬೆರಸಿ. ಬೆರಕೆಯನ್ನು ಗೊಜ್ಜಿನ ಹದಕ್ಕೆ ಬರುವವರೆಗೂ ಉರಿಯಿರಿ. ಬಳಿಕ ಕೊತ್ತಂಬರಿ ಸೊಪ್ಪು ಉದುರಿಸಿ ಇಳಿಸಿರಿ.

ಅಶ್ಟೆ. ಬಿಸಿ ಬಿಸಿ “ಬಹುಬಳಕೆಯ ಮೊಟ್ಟೆ ಗೊಜ್ಜು” ರೆಡಿ! ಇದನ್ನು ಚಪಾತಿ, ಪೂರಿ, ರೊಟ್ಟಿ ಹೀಗೆ ಹಲವು ತಿಂಡಿಗಳೊಡನೆ ಸವಿಯಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.