ಪಯ್ ಹಾಡು

ಗಿರೀಶ ವೆಂಕಟಸುಬ್ಬರಾವ್.

pi

ಎಣಿಕೆಯರಿಮೆ, ಗೆರೆಯರಿಮೆಯಲ್ಲಿ ತನ್ನದೇ ಹೆಚ್ಚುಗಾರಿಕೆ ಪಡೆದಿರುವ ’ಪಯ್’ ಬಗ್ಗೆ ಈ ಹಿಂದಿನ ಬರಹದಲ್ಲಿ ಬರೆದಿದ್ದೆ. ಪಯ್ ಕೊನೆಯಿರದ ಅಂಕಿ ಆದರೂ ಅದರ ಕೆಲವು ಸ್ತಾನಬೆಲೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇಂಗ್ಲಿಶನಲ್ಲಿ ಹತ್ತರೆಣಿಕೆಗಳ ಪದ್ಯಗಳನ್ನು ಕಟ್ಟಿದ್ದಾರೆ. ಕನ್ನಡದಲ್ಲೂ ಈ ತರಹದ ಪದ್ಯವೊಂದನ್ನು ಕಟ್ಟಲು ನಾನು ಇಲ್ಲಿ ಮುಂದಾಗಿದ್ದೇನೆ. ಪಯ್ ಸಾಲುಗಳಲ್ಲಿ ನಲ್ಮೆಯ ಹೊನಲನ್ನು ಪೋಣಿಸಿದ್ದೇನೆ.

3.141592653589793238462643383…

 

ಹೊನಲ (3) ಈ (1) ಅರಿವಿಗೆ (4) ನಾ (1) ಕಯ್ಯಮುಗಿವೆ(5),
ಹತ್ತುಹಲವರಿಮೆಯನು (9) ತಿಳಿ (2) ಕನ್ನಡದಲಿಯೆ (6),
ಬಿಡಿಸಿಹೇಳ್ವ (5) ಪರಿಗೆ (3) ಕಯ್ಯಮುಗಿವೆ (5).

ಅರಿತಗೆಳೆಯರೆಲ್ಲ (8) ಹತ್ತುಹಲವರಿಮೆಯನು (9),

ಚಂದಬರಹದಿ (7) ಅರಿವುನೀಡುವಪರಿಗೆ (9),
ನಮಿಸಿ (3) ಕಯ್ಯ (2) ಮುಗಿವೆ (3) ದಾರಿತೋರ‍್ಪಬೆಳಕಿಗೆ (8)

ಸವಿನುಡಿ (4) ಕನ್ನಡದಲಿಯೆ (6) ಸಾರಿ (2),
ಕನ್ನಡತೆಯನು (6) ಹರಡುವ (4) ,
ಹೊನಲು (3) ಬರಹ (3) ದಾರಿತೋರ‍್ಪಬೆಳಕಿಗೆ (8) ನಮಿಪೆ (3)

(ತಿಟ್ಟಸೆಲೆ: news.yahoo.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Jagadeesh Mt says:

    thumba chennagide

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *