ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ

 ಶ್ರೀನಿವಾಸಮೂರ‍್ತಿ ಬಿ.ಜಿ.

Indian-farmer-drought (1)

ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ
ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ
ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ
ತುಸು ಕರುಣೆಯ ತೋರಯ್ಯ ಮಳೆರಾಯ

ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ
ಗೆದ್ಲು ಸೋಕಿದ್ ಮರ‍್ದಂಗೆ ಮೂಳೆ ಆಗ್ತಯ್ತೆ
ಹೊಟ್ಟೆ ಬೆನ್ಗೆ ಅಂಟ್ಕೊಂಡಯ್ತೆ
ನೀನು ಮಳೆಯ ಸುರ‍್ಸಿ ದಯೆಯ ತೋರು ಮಳೆರಾಯ

ನೆಲವ ಕೊರ‍್ದು ನೀರ‍್ನೆಲ್ಲಾ ಹೀರ‍್ದೆ
ಮೋಡವ ಕರ‍್ಗುಸಿ ಆಗಸನ ವಣಗರ‍್ಬ ಮಾಡ್ದೆ
ನೀ ಬರೋ ದಾರಿಗಳ ಮುಚ್ಚಿ ನಾನ್ ದರ‍್ಪ ತೋರ‍್ದೆ
ಇನ್ ಮ್ಯಾಗೆ ಹಿಂಗೆ ಮಾಡಾಕಿಲ್ಲ ನನ್ನ ಕ್ಸಮಿಸಯ್ಯ ಮಳೆರಾಯ

ಪ್ರಾಣಿ ಪಕ್ಸಿಗೂ ತೊಂದ್ರೆ ಕೊಟ್ಬಿಟ್ಟೆ
ದುರಾಸೆಬಿದ್ ನಿನ್ನನ್ ತುಳಿಯೋದ ಮಾಡ್ಬಿಟ್ಟೆ
ನನ್ನನ್ನು ನರ‍್ಕಕ್ಕೆ ಹಾಕಿ ಅವಕೆ ಸುಕನಾದ್ರೂ ನೀಡಲು ಬಾರಯ್ಯ
ನನ್ನನ್ನು ನಿನ್ನ ಗುಲಾಮನನ್ನಾಗಿ ಮಾಡಲು ಓ ಮಳೆರಾಯ ಬಾರಯ್ಯ

( ಚಿತ್ರಸೆಲೆ: theguardian.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: