ಅಯ್ಯಾರೆಸ್

ಸಿ. ಮರಿಜೋಸೆಪ್

image_gallery

ಬಾಂದಳದಲ್ಲಿ ತೇಲುತ್ತಾ
ನೆಲದ ನೆಲೆಗಳ ಆಗುಹೋಗನ್ನು ನೋಡುತ್ತಾ
ನಕಾಶೆಗಳ ಬಿಡಿಸಿ, ನೀರೋಟವನ್ನು ಗುರುತಿಸಿ,
ನಾಡಿನ ಎಲ್ಲ ತೆರನ ಮಣ್ಣಯ್ಸಿರಿಯನ್ನು ಅಳೆಯುತ್ತಾ,
ಮಣ್ಣು ಕುಡಿನೀರು ಆರಂಬ ಕಾಡು ಕಡಲು ಬೆಟ್ಟ
ನೆಲದೊಡಲು ಗಾಳಿಯಾಟ ತೆರೆಯೇರು
ಸುಯ್ದಾಟಗಳ ಮೇಲೆ ಕಣ್ಗಾವಲಿಟ್ಟು
ನೆಲದರಿಗರಿಗೆ ಅಲ್ಲಿಂದಲೇ ಮಿನ್ಪಟಗಳನ್ನು ಕಳಿಸುತ್ತಿರುವ
ಅಯ್ಯಾರೆಸ್ಸುಗಳ ದೊಡ್ಡ ಹಿಂಡೇ ನಮ್ಮಲ್ಲಿರುವುದು
ಹಿಗ್ಗಿಹೀರೆಯಾಗುವ ಸುದ್ದಿಯಲ್ಲದೆ ಮತ್ತೇನು?

(ಚಿತ್ರ: directory.eoportal.org)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: