ಕಡಲ ತೀರದ ಬಾರ‍್ಗವ – ನಿನಗೆ ನಮೋ

ಶಂಕರ್ ಲಿಂಗೇಶ್ ತೊಗಲೇರ್.

kaaranta

ಅಕ್ಟೋಬರ್ 10 “ಕಡಲ ತೀರ ಬಾರ‍್ಗವ” ಶ್ರೀ ಶಿವರಾಮ ಕಾರಂತರ ಜನುಮದಿನ. ಅದು ಕನ್ನಡಿಗರ ಹೆಮ್ಮೆಯ ದಿನ. ಅವರಿಗೆ ಸಣ್ಣದೊಂದು ಸಮರ‍್ಪಣೆ.

ಮುಂಜಾನೆ ಉದಿಸುವ ರವಿಯ ಗರ‍್ವವ
ಮುಸ್ಸಂಜೆ ಮದಿಸುವ ಕಡಲ ತಟದವ
ಜಗದ ಜೋಪಡಿಯ ಜಡ್ಡು ಕೊಡವಿದವ
ನಿನಗೆ ನಮೋ ಕಡಲ ತೀರದ ಬಾರ‍್ಗವ

ಮೂಕಜ್ಜಿಯ-ಕನಸುಗಳು ಮರಳಿ-ಮಣ್ಣಿಗೆ ಹೋಗುವಾಗ ಚೋಮನದುಡಿಯ ಸದ್ದು ಕೇಳಿ ಅಪೂರ‍್ವ-ಪಶ್ಚಿಮ ಅಬೂವಿಂದ-ಬರ‍್ಮಾಕ್ಕೆ ಅರಸಿಕರಲ್ಲ ಎಂದು ಕೂಗಿದ ಕಾರಂತ ಶಿವರಾಮಕಾರಂತ

ಮೈಮನಗಳ-ಸುಳಿಯಲ್ಲಿ ಬೆಟ್ಟದಜೀವ ಒಂದು ಸರಸಮ್ಮನ-ಸಮಾದಿಯ ಕಂಡು ದರ‍್ಮರಾಯನ-ಸಂಸಾರ ಅಳಿದ-ಮೇಲೆ ಕುಡಿಯರ-ಕೂಸು ಜ್ನಾನ ಪಡೆಯಿತೆಂದ ಕಾರಂತ ಶಿವರಾಮಕಾರಂತ

ಮೈಲಿಕಲ್ಲಿನೊಡನೆ-ಮಾತುಕತೆ ಮಾಡುವಾಗ ಅದ್ಬುತ-ಜಗತ್ತು ಮತ್ತು ವಿಜ್ನಾನ-ಪ್ರಪಂಚದ ಕಾಲದರ‍್ಶನವನ್ನು ಮಾಡಿಸಿ ಯಕ್ಶಗಾನ ಬಯಲಾಟವನ್ನು ಆಡಿದ ಕಾರಂತ ಶಿವರಾಮಕಾರಂತ

ಬಾರತೀಯ-ಚಿತ್ರಕಲೆಯಲ್ಲಿ ಹುಚ್ಚುಮನಸಿನ-ಹತ್ತುಮುಕಗಳ ತೋರಿಸಿ ಚಿಗುರಿದಕನಸು ಮುಗಿದ-ಯುದ್ದ ಅಲ್ಲ ಎಂದು ಮೂಜನ್ಮ ಇದ್ದ ಕೇವಲ-ಮನುಶ್ಯರು ಎಂದ ಕಾರಂತ ಶಿವರಾಮಕಾರಂತ

ಇಳೆಯೆಂಬ ಇದ್ದರೂ-ಚಿಂತೆ ಎಂಬ ನಾವು-ಕಟ್ಟಿದ-ಸ್ವರ‍್ಗ ನಶ್ಟ-ದಿಗ್ಗಜಗಳಾದವೆಂದು ಕಣ್ಣಿದ್ದೂ-ಕಾಣರು ಗೆದ್ದ-ದೊಡ್ಡಸ್ತಿಕೆ ಕನ್ನಡಿಯಲ್ಲಿ ಕಂಡಂತೆ ಕಂಡೆನೆಂದ ಕಾರಂತ ಶಿವರಾಮಕಾರಂತ

ಅಂಟಿದ-ಅಪರಂಜಿ ಹಳ್ಳಿಯ-ಹತ್ತು-ಸಮಸ್ತರು ಸಮೀಕ್ಶೆ ನಡೆಸಿ ಮೊಗ-ಪಡೆದ-ಮನ ಶನೀಶ್ವರನ-ನೆರಳಲ್ಲಿ ನಂಬಿದವರ-ನಾಕನರಕ ಔದಾರ‍್ಯದ-ಉರುಳಲ್ಲಿ ಎಂದ ಕಡಲತೀರದ ಬಾರ‍್ಗವ ಕಾರಂತ ಶಿವರಾಮಕಾರಂತ

(ಚಿತ್ರ ಸೆಲೆ: ಶಂಕರ್ ಲಿಂಗೇಶ್ ತೊಗಲೇರ್  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: