ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್

– ಡಾ|| ವಿ. ನಾಗೇಂದ್ರಪ್ರಸಾದ್.

love-ngp

ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್
ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್

ಹೋದಲ್ ಬಂದಲ್ ಅವಳೇ ಕಾಣಲ್
ಕನಸಲ್ ನೆನಪಲ್ ನನ್ನನೇ ಕೂಗುವಳ್ ನೋಟದಲ್
ಶುರುವಾಯ್ತು ನಂಗೂ ಕಾದಲ್ ; ಶರಣಾದೆ ನಾನು ಬಿಲ್ ಕುಲ್
ತೆರೆದಾಯ್ತು ಪ್ರೀತಿ ಬಾಗಿಲ್ ; ಈ ನಾಲ್ಕು ಕಣ್ಣೆ ಕಾವಲ್
ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್
ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್

ಆಕೆಯು ಮೋಡಗಳಾ ಊರಲಿರೋ ಹೊಂಬಿಸಿಲ್
ನೋಡಲು ನನ್ನ ಮುಕ ದಾಟುವಳೇ ಆ ಹೊಸಿಲ್
ಹೂವ ನಡುವಲ್  ನಡೆದಿದೆ ಏನಿದು ಗುಲ್ ಗುಲ್
ರಾಶಿ ಸೊಬಗಲ್ ತೇಲೋ ಇವಳಲ್ ಮನಸು ಸಿಲುಕಿರಲ್ …
ಮೊದಮೊದಲ್ ಮನಸಲ್  ನಡುಕವೆ ಬರುತಿರಲ್
ಹೊಸ ಅಮಲ್ ಒಡಲಲ್ ನಾನೂ ಅವಳ್ ಅದಲ್ ಬದಲ್
ನುಡಿಯಲ್ ನಡೆಯಲ್ ಅವಳಾ ಗಲ್ ಗಲ್
ಹಟದಲ್ ಚಟದಲ್ ದೇವರ ಪಟದಲ್ ಇಲ್ಲೂ.. ಅಲ್…
ಶುರುವಾಯ್ತು ನಂಗೂ ಕಾದಲ್ ; ಮಂಜಾಗಿ ಬಂದ್ಲು ಮಾಗೀಲ್
ಉಳಲೆಂದು ಮನದ ಹೊಲದಲ್; ತಂದಾಯ್ತು ಪ್ರೀತಿ ನೇಗಿಲ್

ಶಾಮನು ರಾದೆಯನು ಮೋಹಿಸಲ್ ಕಾದಿರಲ್
ಪ್ರೇಮದ ರಾಗದಲಿ ಊದಿದನು ಆ ಕೊಳಲ್
ನೀರದಂಡೆ ಮೇಲ್ ನಿಲ್ಲುವೆನು ಅವಳನ್ ನೋಡಲ್
ಹೂವ ಮುಡಿಸಲ್ ಪ್ರೀತಿ ತಿಳಿಸಲ್ ರಾತ್ರಿ ಹಗಲ್
ದರಣಿಯಲ್ ಇಹದಲ್ ಬದುಕನೆ ಬದಲಿಸಲ್
ಮುಗಿದಿರಲ್ ಪರದಲ್ ನನ್ನಾ ಜೀವಾ ಅಲ್ಲೂ ಮೀಸಲ್
ಕೈಯಲ್ ಹಣೆಯಲ್ ಇರುವಾ ಗೆರೆಯಲ್
ಹೆಸರಲ್ ಉಸಿರಲ್ ಬೇರೆಯಲ್ ಕೊಡುವಳ್ ನನಗೂ ಪಾಲ್ …
ಶುರುವಾಯ್ತು ನಂಗೂ ಕಾದಲ್
ಕನ್ನಡತಿ ಬಂದ್ಲು ಎದುರಲ್
ಒಲವೆಂಬ ಹಣ್ಣು ಹಂಪಲ್
ಹಿಡಿದಾಯ್ತು ನಾನು ಸವಿಯಲ್

ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್
ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್

(ಚಿತ್ರ ಸೆಲೆ: mattersindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: