ಅಣಬೆ – ಗಿಣ್ಣಿನ ಮೊಟ್ಟೆದೋಸೆ

ಆಶಾ ರಯ್.

IMG_3122

ಬೇಕಾಗುವ ಸಾಮಾಗ್ರಿಗಳು:
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ: 4-5 ಎಸಳು
ಉದ್ದ ಹೆಚ್ಚಿದ ಈರುಳ್ಳಿ: 1
ಅಣಬೆ: 10-12
ಸಣ್ಣಗೆ ಹೆಚ್ಚಿದ ಹಸಿಮೆಣಸು: 2
ಈರುಳ್ಳಿ ಸೊಪ್ಪು
ಒಣಗಿದ ಓಮದ ಎಲೆ (oregano leaves): 1/2 ಚಮಚ
ಮೊಟ್ಟೆ: 4
ಹಾಲು: 2 ಚಮಚ
ಕರಿಮೆಣಸಿನ ಪುಡಿ: 1/2 – 1 ಚಮಚ (ರುಚಿಗೆ ತಕ್ಕಶ್ಟು)
ಹೆರಚಿದ ಗಿಣ್ಣು (ಚೀಸ್): 1/4 ಬಟ್ಟಲು
ಎಣ್ಣೆ
ಉಪ್ಪು

ಮಾಡುವ ಬಗೆ:
ಅಣಬೆ ಗಿಣ್ಣಿನ ಮಸಾಲೆ:
1. ದಪ್ಪ ತಳದ ಪಾತ್ರೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿಮೆಣಸು ಹಾಕಿರಿ.
2. ಉದ್ದ ಸೀಳಿದ ಈರುಳ್ಳಿ ಹಾಕಿ, ಈರುಳ್ಳಿ ಕೆಂಪಗಾಗುವರೆಗೆ ಹುರಿಯಿರಿ.
3. ಹೆಚ್ಚಿದ ಅಣಬೆ ಸೇರಿಸಿ 2-3 ನಿಮಿಶ ತಾಳಿಸಿ.
4. ಉಪ್ಪು, ಕರಿ ಮೆಣಸಿನ ಪುಡಿ ಮತ್ತು ಓಮದ ಎಲೆ ಪುಡಿ ಸೇರಿಸಿ ಒಲೆ ಆರಿಸಿ.
5. ತಯಾರಿಸಿದ ಅಣಬೆ ಮಸಾಲೆಗೆ ಈರುಳ್ಳಿ ಸೊಪ್ಪು, ಹೆರಚಿದ ಗಿಣ್ನನ್ನು ಹಾಕಿ ಸರಿಯಾಗಿ ಕಲಸಿಡಿ.

ಮೊಟ್ಟೆದೋಸೆ:
1. 4 ಮೊಟ್ಟೆ, ಚಿಟಿಕೆ ಉಪ್ಪು, ಚಿಟಿಕೆ ಓಮದ ಎಲೆ, ಕರಿಮೆಣಸಿನ ಪುಡಿ, 2 ಚಮಚ ಹಾಲು ಹಾಕಿ ಕೊಡಕಿರಿ (ವಿಸ್ಕ್).
2. ದಪ್ಪ ತಳದ ಕಾವಲಿಗೆ 1 ಚಮಚ ಎಣ್ಣೆ ಹಾಕಿ.
3. ಕೊಡಕಿದ ಮೊಟ್ಟೆ ಮಿಶ್ರಣವನ್ನು ಸುರಿದು, ಮುಚ್ಚಳ ಮುಚ್ಚಿ 2-3 ನಿಮಿಶ ಬಿಡಿ.
4. ಒಲೆ ಆರಿಸಿ, ಮೊಟ್ಟೆದೋಸೆಯ ಒಂದು ಬದಿಯ ಮೇಲೆ ಅಣಬೆ ಗಿಣ್ಣಿನ ಮಸಾಲೆ ಹರಡಿ ಇನ್ನೊಂದು ಬದಿಯಿಂದ ಮುಚ್ಚಿ.

ಅಣಬೆ ಗಿಣ್ಣು ತುಂಬಿದ ಮೊಟ್ಟೆದೋಸೆಯನ್ನು ಬಿಸಿ ಬಿಸಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: