‘ಜಾಲ’ದಲ್ಲಿ ಸಿಲುಕುತ್ತಿರುವ ಯುವಜನತೆ

ಪ್ರಿಯದರ‍್ಶಿನಿ ಶೆಟ್ಟರ್.

team work

ಹತ್ತನೇ ತರಗತಿ ಮುಗಿಸುತ್ತಿದ್ದಂತೆಯೇ ವಿದ್ಯಾರ‍್ತಿಗಳಲ್ಲಿ “ತಮ್ಮ ಗೆಳೆಯ/ ಗೆಳತಿಯರಿಂದ ದೂರಸರಿಯುತ್ತಿದ್ದೇವೆ” ಎಂಬ ಬಾವನೆ ತಲೆದೋರುವುದು ಈಗ ಬಹಳ ವಿರಳ. ಶಾಲಾ ಕಲಿಕೆ ಪೂರೈಸಿ, ಕಾಲೇಜು ಕಲಿಕೆಗೆಂದು ಬೇರೆ ಊರಿಗೆ ಹೋದವರು ಟ್ವಿಟರ್, ವಾಟ್ಸ-ಅಪ್, ಪೇಸ್‍ಬುಕ್, ಗೂಗಲ್ ಪ್ಲಸ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆವಾಗೀವಾಗ ಬೇಟಿಯಾಗುವುದೂ ಇದಕ್ಕೆ ಕಾರಣವಿರಬಹುದು.

ಇತ್ತೀಚಿಗಂತೂ ಇಂತಹ ಜಾಲತಾಣಗಳಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದುವುದು ಒಂದು ಸಾದನೆ ಎಂದು ಕೆಲವರು ಬಾವಿಸಿದಂತಿದೆ. ಹೆಚ್ಚು ಜನ ಸ್ನೇಹಿತರನ್ನು ಹೊಂದುವ ಬರದಲ್ಲಿ ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿದವರ ವಿವರಗಳನ್ನು ನೋಡುವುದೇ ಇಲ್ಲ. ಎಶ್ಟೋ ಜನ ಪ್ರೊಪೈಲ್ ಪಿಕ್ಚರ್‍ನಲ್ಲಿ ತಮ್ಮ ಚಾಯಾಚಿತ್ರ ಅಪ್‍ಲೋಡ್ ಮಾಡುವುದೇ ಇಲ್ಲ. ಇದಕ್ಕೆ ಕಾರಣ ‘ಯಾರಾದರೂ ಅದನ್ನು ದುರುಪಯೋಗ ಮಾಡಿದರೆ?’ ಎಂಬ ಬಯ ಇರಬಹುದು. ಇನ್ನು ಕೆಲವರು ಎರಡು ಅಕೌಂಟ್ ಹೊಂದಿರುವುದೂ ನಮ್ಮ ಗಮನಕ್ಕೆ ಬಂದಿರುತ್ತದೆ.

ಹೊಸದಾಗಿ ಇಂತಹ ಸಾಮಾಜಿಕ ಜಾಲತಾಣಗಳಿಗೆ ಸೈನ್-ಇನ್ ಆದಾಗ ಮೊದಮೊದಲು ಅದರೊಡನೆ ಸಮಯ ಕಳೆಯಲು ಹಪಹಪಿಸುತ್ತೇವೆ. ಬರುಬರುತ್ತಾ ಈ ಆಸಕ್ತಿ ಕಡಿಮೆಯಾಗುತ್ತದೆ. ಒಂದು ವೇಳೆ ಕಡಿಮೆಯಾಗದೇ ಹೋದರೆ, ನಾವು ಅದಕ್ಕೆ ಎಡಿಕ್ಟ ಆಗಿರುವ ಸಾದ್ಯತೆಗಳಿರುತ್ತವೆ.

ಸಾಂಸ್ಕ್ರುತಿಕ ಚಟುವಟಿಕೆಯಲ್ಲೇನಾದರೂ ಸಾದನೆಗೈದಿದ್ದರೆ, ಬಹುಮಾನ ಪಡೆದಿದ್ದರೆ ವಿವರಗಳ ಸಮೇತ ಆ ಸಂದರ‍್ಬದ ಬಾವಚಿತ್ರ ಅಪ್‍ಲೋಡ್ ಮಾಡುವುದು ತಪ್ಪಲ್ಲ. ಆದರೆ ಲೈಕ್, ಕಮೆಂಟ್, ಶೇರ್‍ಗಳಿಗಾಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡುವುದು ತಪ್ಪು. ಸಾದ್ಯವಾದಶ್ಟು ಇಂತಹ ಚಿತ್ರಗಳನ್ನು ‘ಪಬ್ಲಿಕ್’ಗೆ ನೋಡುವ ಅವಕಾಶ ಮಾಡಬಾರದು.

ಎಲ್ಲೋ ಒಂದಾದರೆ ಸರಿ. ನಿಸರ‍್ಗ, ವನ್ಯಜೀವಿಗಳ ಹಾಗೂ ಜಗತ್ತಿನ ಬೇರೆ ಬೇರೆ ಸ್ತಳಗಳ ಚಿತ್ರಗಳಾದರೆ ಅವುಗಳನ್ನು ‘ಪಬ್ಲಿಕ್’ ನೋಡಲಿ. ಈ ತರಹದ ಚಾಯಾಚಿತ್ರಗಳು ನ್ಯಾಶನಲ್ ಜಿಯೋಗ್ರಪಿಕ್, ಎನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್‍ನ ಪೇಸ್‍ಬುಕ್ ಅಕೌಂಟ್‍ನಲ್ಲಿ ಸಿಗುತ್ತವೆ. ಕೆಲವು ಬರಹಗಳು ಪ್ರಸ್ತುತ ಸಮಸ್ಯೆಗಳ ಕುರಿತು ಜಾಗ್ರುತಿ ಮೂಡಿಸುತ್ತವೆ. ಇವುಗಳನ್ನು ಶೇರ್ ಮಾಡಿದರೆ ಅವು ಎಲ್ಲರಿಗೂ ತಲುಪುತ್ತವೆ. ಹಾಗೂ ನಮ್ಮ ಗೆಳೆತನ ¨ಯಸುವವರಿಗೆ ನಮ್ಮ ಅಬಿರುಚಿಗಳ ಪರಿಚಯವಾಗುತ್ತದೆ.

ತಮ್ಮ ಮಕ್ಕಳು ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಏನು ಮಾಡುತ್ತಾರೆಂದು ಎಶ್ಟೋ ಸಲ ಪಾಲಕರು ಕೇಳವುದೇ ಇಲ್ಲ. ಇನ್ನು ಕೆಲವು ಪಾಲಕರು ತಾವೂ ಅಕೌಂಟ್ ತೆರೆದು ಮಕ್ಕಳೊಂದಿಗೆ ಪ್ರೆಂಡ್ ಆಗಿ ಅವರನ್ನು ಗಮನಿಸುತ್ತಾರೆ. ಕೆಲವು ಸಂದರ‍್ಬಗಳಲ್ಲಿ ಪರಿಚಿತರೆಲ್ಲರಿಗೂ ಕರೆಯೋಲೆಯನ್ನು ನಿಗದಿತ ಸಮಯದಲ್ಲಿ ಕಳುಹಿಸುವುದು ಅಸಾದ್ಯವಾದಾಗ ಕರೆಯೋಲೆಯನ್ನು ಅಪ್‍ಲೋಡ್ ಮಾಡಿ ನಮಗೆ ಬೇಕಾದವರನ್ನು ಟ್ಯಾಗ್ ಮಾಡುವುದು ಉತ್ತಮ. ಎಶ್ಟೋ ಸಲ ನಮ್ಮ ನಗರಗಳಿಗೆ ಪ್ರತಿಶ್ಟ ವ್ಯಕ್ತಿಯೊಬ್ಬರು ಬರುತ್ತಿರುವುದು ಪ್ರಚಾರದ ಕೊರತೆಯಿಂದ ಎಲ್ಲರಿಗೂ ತಲುಪುವುದೇ ಇಲ್ಲ. ಆಗ ಸಂಯೋಜಕರು ಅಸಹಾಯಕರಾಗುವುದನ್ನು ಇಂತಹದರಿಂದ ತಪ್ಪಿಸಬಹುದು.

ಒಟ್ಟಿನಲ್ಲಿ ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿದ್ದರೆ, ಅದನ್ನು ಮಿತವಾಗಿ ಬಳಸಿ, ಸಾದ್ಯವಾದಶ್ಟು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ.

(ಚಿತ್ರ ಸೆಲೆ: alwaysaware.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: