ಮೆಂತ್ಯ ಮುದ್ದೆ

– ಶಿಲ್ಪಶಿವರಾಮು ಕೀಲಾರ.

mudde

ಬೇಕಾಗುವ ಅಡಕಗಳು

ಗೋದಿ 1 ಪಾವು
ರಾಗಿ 1 ಪಾವು
ಅಕ್ಕಿ 1 ಪಾವು
ಉದ್ದಿನ ಕಾಳು 1 ಪಾವು
ಮೆಂತ್ಯ ಕಾಳು 1/2 ಪಾವು

ಹಿಟ್ಟು ಮಾಡುವ ಬಗೆ

ಚೊಕ್ಕಗೊಳಿಸಿದ ಗೋದಿ, ರಾಗಿ, ಅಕ್ಕಿ, ಉದ್ದಿನ ಕಾಳು ಮತ್ತು ಮೆಂತ್ಯಯನ್ನು ಬೀಯಿಸಿ ಪುಡಿಮಾಡಿಕೊಳ್ಳಿ. ಈ ಬೀಸಿದ ಹಿಟ್ಟನ್ನು ಗಾಳಿಯಾಡದ ಡಬ್ಬಿಯಲ್ಲಿ ಮೂರು ತಿಂಗಳುಗಳ ಕಾಲ ಬಳಕೆಗೆ ಕೂಡಿಡಬಹುದು.

ಮುದ್ದೆ ಮಾಡುವ ಬಗೆ

ದಪ್ಪ ತಳದ ಪಾತ್ರೆಯೊಂದರಲ್ಲಿ ಒಂದು-ಕಾಲು  ಪಾವು ನೀರಿಗೆ 1/2 ಚಮಚ ಉಪ್ಪು, 1 ಚಮಚ ಹಿಟ್ಟನ್ನು ಕಲಸಿ ದೊಡ್ಡ ಉರಿಯಮೇಲೆ ಬಿಸಿಯಾಗಲು ಇಡಿ. ಹಿಟ್ಟು ಕಲೆತ ನೀರು ಉಕ್ಕಿ ಬಂದಾಕ್ಶಣ ಒಲೆಯ ಉರಿಯನ್ನು ಕಡಿಮೆ ಮಾಡಿ, ಸುಮಾರು ಮುಕ್ಕಾಲು ಪಾವಿನಶ್ಟು ಮುದ್ದೆ ಹಿಟ್ಟನ್ನು ನಿದಾನವಾಗಿ ಕಾದ ನೀರಿಗೆ ಸುರಿಯುತ್ತ ಹಿಟ್ಟನ್ನು ಕೋಲಿನಿಂದ ತಿರುವಿರಿ. ನಿಮಗೆ ಬೇಕಾಗುವ ಹದಕ್ಕೆ ಹಿಟ್ಟನ್ನು ಹೆಚ್ಹು ಕಮ್ಮಿ ಮಾಡಿಕೊಳ್ಳಬಹುದು. ಹೀಗೆ ತಿರುವಿದ ಮುದ್ದೆಯನ್ನು ಸಣ್ಣ ಉರಿಯಮೇಲೆ ಆಗಾಗ ತಿರುವುತ್ತ ಸುಮಾರು 10 ನಿಮಿಶಗಳ ಕಾಲ ಬೇಯಿಸಿ, ನಂತರ ನೀರಿನಿಂದ ಒದ್ದೆ ಮಾಡಿದ ತುದಿ ಬೆರಳುಗಳಿಂದ ಬೆಂದ ಹಿಟ್ಟನ್ನು ಮುಟ್ಟಿ ನೋಡಿ, ಕೈಗೆ ಅಂಟುತ್ತಿದ್ದರೆ ಇನ್ನು ಸ್ವಲ್ಪ ಸಮಯ ಬೇಯಿಸಿ, ಅಂಟದಿದ್ದರೆ ಒಲೆಯಿಂದ ಕೆಳಗಿಳಿಸಿ ನುಣುಪಾದ ತಟ್ಟೆಯಮೇಲೆ ಬೆಂದ ಬಿಸಿ ಹಿಟ್ಟನ್ನು ಹಾಕಿಕೊಂಡು ತಣ್ಣೀರಿನಲ್ಲಿ ಕೈ ಅದ್ದಿಕೊಂಡು ನಿಮಗೆ ಬೇಕಾದ ಗಾತ್ರಕ್ಕೆ ಗುಂಡಗೆ ಮುದ್ದೆಗಳನ್ನು ಕಟ್ಟಿ ತಯಾರಿಸಿ.

ಈ ಬಿಸಿ ಬಿಸಿ ಮುದ್ದೆಯನ್ನು ತುಪ್ಪದ ಜೊತೆಗೆ ಯಾವುದೇ ಸಾರು, ಚಟ್ನಿ/ಗೊಜ್ಜಿನಲ್ಲಿ ಅದ್ದಿ ತಿನ್ನಬಹುದು.

ಮಯ್ಯೊಳಿತಿನ ಗುಣಗಳು

ಸಮತೋಲನ ಊಟದಲ್ಲಿ ಇರಬೇಕಾದ ಬಹುತೇಕ ಅಂಶಗಳಾದ ಕಾರ‍್ಬೋಹೈಡ್ರೇಟ್ (carbohydrates), ಮುನ್ನು (protein), ಕೊಬ್ಬು (fat), ಕಬ್ಬಿಣ (iron) ಕ್ಯಾಲ್ಸಿಯಂ (calcium), ಮೆಗ್ನೀನಿಸಿಯಮ್ (magnesium), ಪಾಸ್ಪರಸ್ (phosphorus), ಪೊಟಾಸಿಯಂ (pottassium), ಜಿನ್ಕ್ (zinc), ನಾರು (fiber), ಅಮೈನೊ ಆಸಿಡ್ಸ್ (amino acids), ಮತ್ತು ವಿಟಮಿನ್ ( B1, B12,B3, B6, B9, E, K) ಗಳನ್ನೂ ಹೊಂದಿರುತ್ತದೆ. ಆದ್ದರಿಂದ, ಈ ಮುದ್ದೆಯು ಬೆಳೆಯುವ ಮಕ್ಕಳಿಂದ ಎಲ್ಲ ವಯಸ್ಸಿನವರಿಗೆ ಸಂಪೂರ‍್ಣ ಆಹಾರವಾಗುತ್ತದೆ. ಇದಲ್ಲದೆ, ಸಕ್ಕರೆ ಬೇನೆ ಇರುವರಿಗೆ ಅಕ್ಕಿ ಹಿಟ್ಟು ಬಿಟ್ಟು ಮಾಡಿ ತಿಂದರೆ ಸಕ್ಕರೆ ಅಂಶವನ್ನು ಮಿತಿಯಲ್ಲಿ ಇಟ್ಟುಕೊಳ್ಳಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. ಧನ್ಯವಾದ, ಮುದ್ದೆಯ ಲೇಖನ ಮುದ್ದಾಗಿದೆ. 🙂
    ನನಗೆ ಅರ್ಥವಾಗದಿದ್ದುದು ಅದರ ಹೆಸರು !
    ಒಂದು ಪಾಲು ರಾಗಿ
    ಒಂದು ಪಾಲು ಗೋಧಿ
    ಒಂದು ಪಾಲು ಅಕ್ಕಿ
    ಒಂದು ಪಾಲು ಉದ್ದು
    ಒಂದು ಪಾಲಿನ ಇವುಗಳನ್ನು ಕಡೆಗಣಿಸಿ ಅರ್ಧ ಪಾಲಿನ ಮೆಂತ್ಯದ ಹೆಸರು ಈ ಮುದ್ದೆಗೆ ಅಂಟಿಕೊಂಡದ್ದು ಹೇಗೆ?
    ಅಕ್ಕಿ, ರಾಗಿ, ಗೋಧಿಯ ಮುದ್ದೆಗಳು ಇರುವಂಥವೆ ಎಂದು ಕಡೆಗಣಿಸಿದರೂ ಅದು ಹೆಚ್ಚು ಪಾಲನ್ನು ಹೊಂದಿರುವ
    ಉದ್ದಿನ ಮುದ್ದೆ ಏಕೆ ಆಗಲಿಲ್ಲ ಎಂಬುದು?
    ಏನೇ ಆದ್ರೂ ಮುದ್ದೆ ಮಾತ್ರ ಸೂಪರ್ !

  2. HM Sunita says:

    ನನಗನಿಸಿದ್ದು — ಬೇರೆ ಯಾವುದೆ ಅಡುಗೆಯಲ್ಲಿ ಬಳಸುವ ಮೆಂತ್ಯೆ ಪ್ರಮಾಣಕ್ಕು ಈ ಅಡುಗೆಯಲ್ಲಿ ಬಳಸುವ ಪ್ರಮಾಣಕ್ಕು ವ್ಯತ್ಯಾಸವಿದೆ ಹೆಚ್ಚಿನ ಪ್ರಮಾಣದಲ್ಲಿ ಮೆಂತ್ಯೆ ಇರುವುದರಿಂದ ಇದು ಮೆಂತ್ಯ ಮುದ್ದೆಯಾಗಿರಬಹುದು

ಅನಿಸಿಕೆ ಬರೆಯಿರಿ:

%d bloggers like this: