ಹೊಸತನ್ನು ‘ಹುಟ್ಟುಹಾಕು’ವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ.

competitiveness

ಪೈಪೋಟಿತನದ ಮತ್ತು ಒಳ್ಳೆಯ ಹಣಕಾಸೇರ‍್ಪಾಡನ್ನು (economy) ರೂಪಿಸುವುದರಲ್ಲಿ ಚಳಕದರಿಮೆ (Technology) ಮತ್ತು ಹೊಸಮಾರ‍್ಪು (innovation) ಮುಕ್ಯವಾದ ಪಾತ್ರ ವಹಿಸುತ್ತದೆ. ಅವುಗಳು ಮಾಡುಗತನದಲ್ಲಿನ ಪಡೆತಗಳನ್ನು (productivity gains) ಹೆಚ್ಚಿಸುವುದಲ್ಲದೇ, ತಮ್ಮ ಮಾಡುಗೆಗಳ (products) ಅತವಾ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದರತ್ತ ಕಂಪನಿಗಳು ಗಮನ ಹರಿಸುವ ಹಾಗೆ ಮಾಡುತ್ತವೆ.

ಈ ಕುರಿತು ‘ದ ವರ‍್ಲ್ಡ್ ಎಕನಾಮಿಕ್ ಪೋರಂ’ (The World Economic Forum), 140 ನಾಡುಗಳಲ್ಲಿನ ಹಣಕಾಸೇರ‍್ಪಾಡನ್ನು (economy) ಒರೆಗೆ ಹಚ್ಚಿ ಒಂದು ವರದಿಯನ್ನು ತಂದಿದೆ. ಅದುವೇ ‘ಗ್ಲೋಬಲ್ ಕಾಂಪಿಟಿಟಿವ್ನೆಸ್ ರಿಪೋರ‍್ಟ್-2015-16’. ನಾಡುಗಳ ಹಣಕಾಸೇರ‍್ಪಾಡನ್ನು ಅಳೆಯಲು ಹಲವಾರು ಮಾನದಂಡಗಳನ್ನು ಬಳಸಿ ನಾಡುಗಳಿಗೆ ರ‍್ಯಾಂಕ್ ನೀಡಲಾಗಿದೆ. ನಾಡಿನಲ್ಲಿರುವ ಅರಿಮೆಯ ಅರಕೆಮನೆಗಳ (scientific research institution) ಗುಣಮಟ್ಟ ಮತ್ತು ‘ಅರಕೆ ಮತ್ತು ಹೊಸಮಾರ‍್ಪುಗಳಿಗೆ’ ನಾಡುಗಳು ಕೊಡುವ ಒತ್ತು (ಮಾಡುವ ವೆಚ್ಚ) – ಇವುಗಳನ್ನು ಪರಿಗಣಿಸಿ ನಾಡುಗಳಿಗೆ ಜಾಗತಿಕ ಮಟ್ಟದಲ್ಲಿ ರ‍್ಯಾಂಕ್ ನೀಡಲಾಗಿದೆ.

ಆ ವರದಿಯ ಪ್ರಕಾರ ಹೊಸದನ್ನು ಕಂಡುಹಿಡಿಯುವುದರಲ್ಲಿ ಅತವಾ ಹುಟ್ಟು ಹಾಕುವುದರಲ್ಲಿ ಸ್ವಿಜರ್‍ಲ್ಯಾಂಡ್ ಮೊದಲ ಸ್ತಾನ ಗಳಿಸಿದೆ. ಹೋದ ವರುಶದ ವರದಿಯಲ್ಲಿ ಜಾಗತಿಕ ಮಟ್ಟದಲ್ಲಿ 4ನೇ ಸ್ತಾನದಲ್ಲಿದ್ದ ಪಿನ್ಲ್ಯಾಂಡ್ ಈ ವರುಶ 2ನೇ ಸ್ತಾನಕ್ಕೇರಿದೆ. ಜರ‍್ಮನಿ, ಸ್ವೀಡನ್, ನೆದರ‍್ಲ್ಯಾಂಡ್ ಮತ್ತು ಡೆನ್ಮಾರ‍್ಕ್ ನಾಡುಗಳು ಮೊದಲ ಹತ್ತರಲ್ಲಿ ಸ್ತಾನ ಪಡೆದ ಇತರ ಯೂರೋಪಿನ ನಾಡುಗಳಾಗಿವೆ. ಮೊದಲ ಹತ್ತರಲ್ಲಿ ಆರು ಸ್ತಾನಗಳು ಯೂರೋಪಿನ ನಾಡುಗಳ ಪಾಲಾಗಿವೆ.  ಏಶ್ಯಾದಿಂದ ಜಪಾನ್ ಮತ್ತು ಸಿಂಗಪೂರ್ ನಾಡುಗಳಿವೆ. ಉಳಿದ ಎರಡು ಸ್ತಾನಗಳನ್ನು ಅಮೇರಿಕಾ ಮತ್ತು ಇಸ್ರೇಲ್ ಪಡೆದುಕೊಂಡಿವೆ.

( ಮಾಹಿತಿ  ಮತ್ತು ಚಿತ್ರ ಸೆಲೆ : agenda.weforum.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: