ಉಂಡ್ಗೋಳಿ ತಂದೂರಿ

ಪ್ರೇಮ ಯಶವಂತ.

Titta.1

ಬೇಕಾಗಿರುವ ಅಡಕಗಳು

ಉಂಡ್ಗೋಳಿ (ತುಂಡರಿಸದ ಉಂಡೆ ಕೋಳಿ) – 1 ಕೆ. ಜಿ  (ಹೆಚ್ಚು-ಕಡಿಮೆ)
ಮೊಸರು – 1 ಬಟ್ಟಲು
ಕಾರದ ಪುಡಿ – 1 ಚಮಚ ಅತವ ಕಾರಕ್ಕೆ ತಕ್ಕಶ್ಟು
ನಿಂಬೆಹಣ್ಣು – 1
ಕಾಳು ಮೆಣಸಿನ ಪುಡಿ – 1/2 ಚಮಚ
ಕೊತ್ತಂಬರಿ ಬೀಜದ ಪುಡಿ – 1/2 ಚಮಚ
ಜೀರಿಗೆ ಪುಡಿ – 1 ಚಮಚ
ಕಸ್ತೂರಿ ಮೆಂತ್ಯೆ ಪುಡಿ – 1/2 ಚಮಚ
ಅರಿಸಿನ – 1 ಚಿಟಕಿ
ಅಡುಗೆ ಬಣ್ಣ (ಕೇಸರಿ) – 1/4 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಅಡುಗೆ ಎಣ್ಣೆ – 2 ಚಮಚ (ಆಯ್ಕೆಗೆ ಬಿಟ್ಟಿದ್ದು)

ಮಾಡುವ ಬಗೆ

ಕೋಳಿಯ ಮೇಲಿನ ತೊಗಲನ್ನು ತೆಗೆದು ಹಾಕಿ, ದಪ್ಪ ಕಂಡಗಳುಳ್ಳ ಬಾಗಗಳಲ್ಲಿ ಕಂಡವನ್ನು ಸೀಳಬೇಕು. ಮಸಾಲೆಯು ಕಂಡಗಳ ಆಳಕ್ಕೆ ಇಳಿಯಲು ಈ ಸೀಳುವಿಕೆ ನೆರವಾಗುತ್ತದೆ. ಒಂದು ಬಟ್ಟಲಿನಲ್ಲಿ ಕಾರದ ಪುಡಿ, ಉಪ್ಪು ಮತ್ತು  ನಿಂಬೆ ರಸಗಳನ್ನು ಕಲಸಿಕೊಂಡು ಕೋಳಿಯ ಮೇಲೆಲ್ಲ ಸವರಿ. ಸವರಿದ ಕೋಳಿಯನ್ನು 5-10 ನಿಮಿಶಗಳವರೆಗೆ ಬಟ್ಟಲು/ಬೋಸಿಯೊಂದರಲ್ಲಿ ಇಡಿ. ಮತ್ತೊಂದು ಬಟ್ಟಲಿನಲ್ಲಿ ಮೊಸರು, ಕಾರದ ಪುಡಿ, ಕಸ್ತೂರಿ ಮೆಂತ್ಯೆ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಅರಿಸಿನ ಪುಡಿ, ಅಡುಗೆ ಬಣ್ಣ ಹಾಗು ಉಪ್ಪುಗಳನ್ನು ಹಾಕಿ ಕಲಸಿಕೊಳ್ಳಿ. ಇದನ್ನು ಕೋಳಿಯ ಮೇಲೆ ಚೆನ್ನಾಗಿ ಸವರಿ. ನೀವು ಎಣ್ಣೆ ಬಳಸುವುದಾದರೆ ಕೋಳಿಯ ಮೇಲೆ ಎರಡು ಚಮಚ ಎಣ್ಣೆ ಹಾಕಿ ಒಮ್ಮೆ ಕಲಸಿ. ನಿಮ್ಮ ‘ಓವನ್’ಅನ್ನು 450 ಡಿಗ್ರಿಗೆ ಮೊದಲೇ ಬಿಸಿ (pre-heat) ಮಾಡಿಟ್ಟುಕೊಳ್ಳಿ. ಬಿಸಿಯಾದ ಮೇಲೆ ಕೋಳಿಯನ್ನು ಓವನ್ ತಟ್ಟೆಯಲ್ಲಿ ಇಟ್ಟು 30-35 ನಿಮಿಶದವರೆಗು ಬೇಯಿಸಿ ತೆಗೆದರೆ ನಿಮ್ಮ ಉಂಡ್ಗೋಳಿ ತಂದೂರಿ ಅಣಿಯಾಗುತ್ತದೆ. ಇದನ್ನು ಹಸಿ ಈರುಳ್ಳಿ ಮತ್ತು ನಿಂಬೆರಸದೊಂದಿಗೆ ಸವಿಯಿರಿ.

[ಉಂಡೆ ಕೋಳಿಯ ಬದಲು ಕತ್ತರಿಸಿದ ಕೋಳಿಯನ್ನು ಬಳಸಿ (ಕೋಳಿ ಕಾಲುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ) ತುಂಡ್ಗೋಳಿ ತಂದೂರಿಯನ್ನು ಮಾಡಬಹುದು]

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: