ಕಳಚಿ ಬಿತ್ತು 2014 ರ ಕೊಂಡಿ

– ಸಂತೋಶ್ ಇಗ್ನೇಶಿಯಸ್.

bye

ಹುಸಿ ಬದುಕಿನ ಹಸಿ ಹಸಿ ನೆನಪು
ಕೊಳೆತು ನಾರುತಿತ್ತು ಹದಿನಾಲ್ಕು
ಸಲುಬೆಯಲ್ಲಿ ಸಿಲುಕಿ ಸತ್ತು ಹೋಯಿತು
ಕಳಚಿ ಬಿಡು ಇಪ್ಪತ್ತರ ಕೊಂಡಿಯಿಂದ
ಕೊನೇಪಕ್ಶ ಮರೆತು ಬಿಡು ಇನ್ನಾದರೂ
ಹದಿಹರಯ ಹದಿನಾಲ್ಕರ ಸಹವಾಸ

ರಕ್ತ ಕೆಸರಲಿ ನೆಟ್ಟ ಬಾಂಬ್ ಸಿಡಿದು
ಬಿಳಿಯ ಗೋಡೆಗೆ ಮೊಳೆಯ ಜಡಿದು
ನೇತು ಹಾಕಿತು ಮಕ್ಕಳನು
ಹದಿಹರಯ ಹದಿನಾಲ್ಕು

ಪುಕ್ಕ ಕಿತ್ತುಕೊಂಡು ಲೋಹದ ಹಕ್ಕಿ
ಹೆಕ್ಕಲು ಸಿಕ್ಕದೆ ಪಾತಾಳ ನುಂಗಿ
ಪದೇ ಪದೇ ಮಾಯವಾಗುತಿದೆ
ದುರಂತ ಸಾಗರದೊಳಗೆ ಹೊಕ್ಕಿ

ನೆಲಕೆರೆದರು ಗಣಿ ಸಿಗಲಿಲ್ಲ
ಕಾಲುಕೆರೆದುದರಿಂದ ಕಲಾಪವು ನಡೆಯಲಿಲ್ಲ
ಅಮೂಲ್ಯಗಳಿಗೆ ಕ್ಯಾಂಡಿ ಕ್ರಶ್ನಲ್ಲಿ ಹರಣವಾಯಿತು
ಸಮಸ್ಯೆಗಳಿಗೆ ಹೊಸ ಸರ‍್ಕಾರವು ಅಂತಿಮ ಸಂಸ್ಕಾರ ನಡೆಸಲಿಲ್ಲ

ಅವನತಿಯಲ್ಲಿದ್ದ ‘ಆದಾರ‍್’ ಜೀವಪಡೆದಿದೆ
ಮೋದಿಯೇ ಆದಾರಸ್ತಂಬ ಎಂದು ದೇಶ ನಂಬಿದೆ
ಪಿಲಂ ಪಿ ಕೆ ಅಬ್ಬರ ಜೋರು
ಚಾರ‍್ಮುಡಿ ಗಾಟು ರಸ್ತೆ ಚೂರು ಚೂರು

ಅದೆಲ್ಲಿತ್ತೊ ಗಾಟು ಗಬ್ಬೆಂದು
ಗುದ್ದಿ ಬಂತು ಮಂಡೂರಿನಿಂದ
ಹಸಿರು ನಾಡು ಬೆಂಗಳೂರಿನ ಉಸಿರು ಹೆಸರು
ಹಾಳು ಹಾಳು ಪರದಾಟ ಗೋಳು

ತಪ್ಪು ಮಾಡಬೇಡಿ ಕಂದಮ್ಮಗಳಿರಾ
ಎಂದ ಶಾಲೆಗಳೇ ಒಂದೊಂದಾಗಿ
ಹಿಡಿದು ಕಂದಮ್ಮಗಳನ್ನೇ ನೆಕ್ಕಿಬಿಟ್ಟವು
ಕೆಮ್ಮಿದ್ದಾಯಿತು ಕಕ್ಕಿದ್ಡಾಯಿತು
ಚೀ ತೂ…. ಪಾಪಿಗಳ ಲೋಕ
ಮರೆತು ಬಿಡು ಇನ್ನಾದರೂ ಈ ಹದಿನಾಲ್ಕ

(ಚಿತ್ರ ಸೆಲೆ:  good-wallpapers.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: