ಬಸಿರಗೂಸು

– ರತೀಶ ರತ್ನಾಕರ.
a-flowers_in_her_hand-1388575

ಚೆಲುವ ಬಿಂದಿಗೆಯೊಳಗೆ
ಹೊಳೆವ ತಿಂಗಳ ಪಡಿನೆಳಲು
ಬೆಳೆಯುತಿದೆ ಬೆಳಗುತಿದೆ
ಅಲುಗದೆ ತಿಳಿನೀರು ತುಂಬಿರಲು|

ಮೇಲ್ನೆಲದ ಕೊಳದೊಳಗೆ
ಮುತ್ತಿನ ತತ್ತಿಯ ಬಿಟ್ಟಿಹರು
ಹೊತ್ತೊತ್ತಿಗೆ ತುತ್ತನಿಕ್ಕಲು
ಬಲಿತು ಬೀರುವುದು ಹೊಗರು|

ಹೂದೋಟದ ಬಾನಿಯೊಳು
ಮಿನುಗುತಿದೆ ಬಾನ ಚುಕ್ಕಿ
ಬಾಡದ ಬೆಳದಿಂಗಳಿರಲು
ಮಿರುಗುವುದೋ ಕಣ್ಣ ಕುಕ್ಕಿ|

ತುಂಬಿ ತುಳುಕಲು ನೀರು
ಜಾರಿತೇ ಹಾಲುಗಲ್ಲದ ಕೂಸು
ಕೆಂದುಟಿಯ ಮೆದುಮಯ್ಯ
ಕೊಳೆಯಿರದ ತಿಳಿಯಾದ ಮನಸು|

(ಚಿತ್ರ ಸೆಲೆ: wallpapersinhq.in)

 Categories: ನಲ್ಬರಹ

ಟ್ಯಾಗ್ ಗಳು:, , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s