ಏನೇ ಆಗಲಿ ನೀ ನಮ್ಮವನು

– ಆದರ‍್ಶ ಬಿ ವಸಿಶ್ಟ.

nammavanu

ಕಾವಿಯ ಕಾನದಿ ಅಡಗಿಸಿಟ್ಟೆವು,
ಮಂತ್ರದ ಬೇಲಿಯ ಹಾಕಿಬಿಟ್ಟೆವು,
ಗುಡಿಯ ಗೋಡೆಯಲಿ ಕೂಡಿಹಾಕಿದೆವು,
ಏನೇ ಆಗಲಿ ನೀ ನಮ್ಮವನು

ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,
ಬಾರಿ ಕೋರಿಕೆಗೆ ಮಹಲಿರಬೇಕು,
ಬಳಿಯಲಿ ಕಾಣಲು ಅನುಮತಿಬೇಕು,
ಜೇಬಿನ ತುಂಬಾ ನೋಟಿರಬೇಕು
ಆದರೂ ಬರುವೆವು, ಏಕೆ?
ಏನೇ ಆಗಲಿ ನೀ ನಮ್ಮವನು

ನೀನಾರೆಂದೇ ತಿಳಿದಿಲ್ಲ,
ನಿನ್ನ ಅಬಿಪ್ರಾಯವೂ ಗೊತ್ತಿಲ್ಲ,
ಅವನ ಹೊಡೆದು, ಇವನ ಕಡಿದು
ನಿನ್ನ ಹೆಸರನೇ ನುಡಿಯುವೆವು, ಏಕೆ?
ಏನೇ ಆಗಲಿ ನೀ ನಮ್ಮವನು

ತಿಲಕ ಇಟ್ಟರೆ ಹಿಂದೂ ನಾನು,
ಟೋಪಿ ಹಾಕಿದೊಡೆ ಮುಸ್ಲಿಮನು,
ಕೊರಳಿಗೆ ಶಿಲುಬೆ ಬೀಳುತ್ತಲೇ
ನಾ ಈಸಾಯಿಯಾಗಿಬಿಡುವೆನು
ನನಗೆ ನಾನಾರೆಂದೇ ತಿಳಿದಿಲ್ಲ
ಆದರೂ ನಿನ್ನನಂತೂ ನಾ ಬಿಡಲೊಲ್ಲೆ, ಏಕೆ?

ಏನೇ ಆಗಲಿ ನೀ ನಮ್ಮವನು

( ಚಿತ್ರ ಸೆಲೆ: jasonbladd.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: