ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. bhatmahesht says:

    ಕುಗ್ಗುಬಡ್ಡಿಯಲ್ಲಿ ನಿರಂತರವಾಗಿ ಹಣ ಇದ್ದರೆ ಅದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದು ಒಂದು ದಿನ ಅದು ಸೊನ್ನೆ ಆಗಬಹುದು. ಬ್ಯಾಂಕಿನಲ್ಲಿ ಹಣ ಇಡುವುದರ ಬದಲು ಭೂಮಿಯಲ್ಲಿ ಹೂತಿಡಲು ಆರಂಭಿಸಬಹುದು. ಕುಗ್ಗು ಬಡ್ಡಿ ವ್ಯವಸ್ಥೆಯಲ್ಲಿ ಸಾಲದ ಮೇಲಿನ ಬಡ್ಡಿ ಯಾವ ರೀತಿ ಇರಬಹುದು ಎಂಬ ಕುತೂಹಲ.

  2. ಹಣಕಾಸಿನ ಬಿಕ್ಕಟ್ಟು ತಲೆದೋರಿದಾಗ ಹಣಮನೆಗಳು ಸಾಮಾನ್ಯವಾಗಿ ಬಡ್ಡಿಯನ್ನು ( ಇಡುಪಡೆಗಳಲ್ಲಿ ಕೂಡಿಡುವ ದುಡ್ಡಿಗೆ ಕೊಡುವ ಬಡ್ಡಿಯಾಗಿರಬಹುದು ಅತವಾ ಕೊಳ್ಳುಗರು ತೆಗೆದುಕೊಳ್ಳುವ ಸಾಲದ ಮೇಲೆ ಹಾಕುವ ಬಡ್ಡಿಯಾಗಿರಬಹುದು ) ಕಡಿತಗೊಳಿಸುವ ತೀರ‍್ಮಾನ ಕೈಗೊಳ್ಳುತ್ತವೆ. ‘ಕುಗ್ಗುಬಡ್ಡಿ’ ಜಾರಿ ಇದ್ದಾಗಲೂ ಕೂಡ ಸನ್ನಿವೇಶ ಇದಕ್ಕಿಂತ ಬೇರೆ ಇರುವುದಿಲ್ಲ. ಸಾಲದ ಮೇಲೆ ಬಡ್ಡಿ ಕಡಿಮೆ ಇದ್ದಾಗ ಸಾಲ ತೆಗೆದುಕೊಳ್ಳಲು ಹೆಚ್ಚು ಹೆಚ್ಚು ಮಂದಿ ಮನಸ್ಸು ಮಾಡುವವರು ಎಂಬ ಯೋಚನೆ ಹಣಮನೆಗಳದ್ದು. ಆದರೆ ಇಡುಪಡೆಗಳಿಂದ ಹಣವನ್ನು ತೆಗೆದು ಮನೆಯಲ್ಲಿ ಅತವಾ ನೆಲದಲ್ಲಿ ಮಂದಿ ಇಡಲು ಶುರು ಮಾಡಿದರೆ, ಸಾಲವಾಗಿ ಪಡೆಯುವವರಿಗೆ ಕೊಡಲು ಬೇಕಾಗಿರುವ ದುಡ್ಡು ಹಣಮನೆಗಳಲ್ಲಿ ಕಡಿಮೆ ಆಗತೊಡಗುತ್ತದೆ. ಈ ಪರಿಸ್ತಿತಿ ಸಾಲಕ್ಕಾಗಿ ಬೇಡಿಕೆಯನ್ನು ಮೆಲ್ಲಗೆ ಹೆಚ್ಚಿಸುತ್ತ, ಬಡ್ಡಿಯ ದರವನ್ನೂ ಹೆಚ್ಚಿಸುವಂತೆ ಮಾಡುತ್ತದೆ. ಇದರಿಂದ ಹಣಕಾಸಿನ ವಹಿವಾಟುಗಳು ಮೊದಲಿನಂತಾಗುವವು ಎಂಬ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.

ಅನಿಸಿಕೆ ಬರೆಯಿರಿ:

%d bloggers like this: