ಅನ್ನದ ಕೇಸರಿಬಾತ್

ಕಲ್ಪನಾ ಹೆಗಡೆ.

IMG_0615
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅನ್ನದ ಕೇಸರಿ ಬಾತ್ ಮನೆ ಮನೆಗಳಲ್ಲಿ ಮಾಡುತ್ತಾರೆ. ಅದರಲ್ಲೂ ಮದುವೆ ಹಾಗೂ ಇನ್ನಿತರ ಸಮಾರಂಬಗಳಲ್ಲಿ ಸಿಹಿ ತಿನಿಸುಗಳಲ್ಲಿ ದೊಡ್ಡ ಸಿಹಿ ತಿನಿಸು ಎಂದು ಹೆಚ್ಚಿನ ಸಂಕ್ಯೆಯಲ್ಲಿ ಮಾಡುತ್ತಾರೆಂದರೆ ತಪ್ಪಾಗಲಾರದು. ಅನ್ನದ ಕೇಸರಿ ಬಾತನ್ನು ಮಾಡುವುದು ಹೇಗೆ ಅಂತ ತಿಳ್ಕೊಬೇಕಾ? ಪ್ರಯತ್ನ ಮಾಡ್ತಿರಾ?

ಬೇಕಾಗುವ ಪದಾರ‍್ತಗಳು

2 ಸೇರು ಅಕ್ಕಿ ( ಸಣ್ಣ ಅಕ್ಕಿ), 4 ಸೇರು ಸಕ್ಕರೆ, ಅರ‍್ದ ನಿಂಬೆ ಹಣ್ಣು, 100 ಗ್ರಾ ಕೇಸರಿ, 200ಗ್ರಾಂ ತುಪ್ಪ, ಅರ‍್ದ ಕಪ್ ಹಾಲು, ಗೋಡಂಬಿ, ದ್ರಾಕ್ಶಿ, ಉಪ್ಪು.

ಮಾಡುವ ಬಗೆ

ಮೊದಲು ಅಕ್ಕಿಯನ್ನು ತೊಳೆದು ಅನ್ನವನ್ನು ಮಾಡಿಕೊಳ್ಳಿ. ನಂತರ ಅನ್ನದ ಜೊತೆಗೆ ಸಕ್ಕರೆ, ತುಪ್ಪ, ಕೇಸರಿಯನ್ನು ಹಾಲಿನಲ್ಲಿ 10 ನಿಮಿಶ ನೆನಸಿ ಕಿವುಚಿ ಹಾಕಿದ ಮೇಲೆ ಚೆನ್ನಾಗಿ  ಬೆರೆಸಿ. ಆಮೇಲೆ ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಸೌಟಿನಿಂದ ಚೆನ್ನಾಗಿ ಬೆರೆಸುತ್ತಾ ಇರಿ. ಪಾಕ ಬಂದ ಮೇಲೆ ತುಪ್ಪ ಉಗುಳುವ ಹೊತ್ತಿಗೆ ಕೆಳಗೆ ಇಳಿಸಿ ಅದಕ್ಕೆ ಗೋಡಂಬಿಯನ್ನು  ಹಾಗೂ ದ್ರಾಕ್ಶಿಯನ್ನು ತುಪ್ಪದಲ್ಲಿ ಹುರಿದು ಹಾಕಿ. ತಯಾರಿಸಿದ ಕೇಸರಿಬಾತನ್ನು ತಟ್ಟೆಗೆ ಹಾಕಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: