ಕನ್ನಡಿಗರ ಉದ್ಯೋಗದಾತಿಯ ಕಣ್ಮರೆ

ಕೆ.ಟಿ.ಆರ್.

SAROJINI_M

ಮಾಜಿ ಕೇಂದ್ರ ಸಚಿವೆ ಮತ್ತು ಮೊದಲ ಸಂಸದೆ, ಕನ್ನಡ ಕಟ್ಟಾಳು, ವಾಗ್ಮಿ, ಕನ್ನಡ-ಮರಾಟಿ ಅನುವಾದಕಿ, ಬಹುಮುಕ ಪ್ರತಿಬೆಯಾದ ಡಾ. ಸರೋಜಿನಿ ಮಹಿಶಿರವರು ಉತ್ತರ ಪ್ರದೇಶದ ಗಾಸಿಯಾಬಾದ್‍ನಲ್ಲಿ ಜನವರಿ 25 ರಂದು ಹ್ರುದಯಾಗಾತದಿಂದ ವಿದಿವಶರಾಗಿದ್ದಾರೆ. ಇದು ಕನ್ನಡಿಗರಿಗೆ ತುಂಬಲಾರದಂತಹ ನಶ್ಶ. ಕನ್ನಡತನದ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವವಿದ್ದಂತಹ ದಿಟ್ಟ ಮಹಿಳೆ ಅಸ್ತಂಗತರಾದಂತಾಗಿದೆ.

ಇವರ ನಿದನದ ಆಗಾತವನ್ನು ಅವರ ಕುಟುಂಬ ವರ‍್ಗದವರು ಸಹಿಸಿಕೊಳ್ಳುವ ಶಕ್ತಿಯನ್ನು ಬಗವಂತ ನೀಡಲಿ ಎಂದು ಪ್ರಾರ‍್ತಿಸುತ್ತೇನೆ.ದಾರವಾಡದ ನ್ಯಾಯವಾದಿಗಳ ಕುಟುಂಬದಲ್ಲಿ ಬಿಂದುರಾವ್ ಮಹಿಶಿ ಮತ್ತು ಕಮಲಾಬಾಯಿ ಮಗಳಾಗಿ 1927ರ ಮಾರ‍್ಚ್ 3 ರಂದು ಜನಿಸಿದರು. ದಾರವಾಡದಲ್ಲಿಯೇ ಪ್ರಾತಮಿಕ, ಮಾದ್ಯಮಿಕ ಶಿಕ್ಶಣವನ್ನು ಪೂರೈಸಿದರು. ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕ್ರುತ ವಿಶಯದಲ್ಲಿ ಬಿ.ಎ. ಮತ್ತು ಎಂ.ಎ. ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. 1955ರಲ್ಲಿ ಕರ‍್ನಾಟಕ ವಿಶ್ವವಿದ್ಯಾಲಯದ ಕಾನೂನು ಪದವಿಯಲ್ಲಿ ಪ್ರತಮ ರ‍್ಯಾಂಕ್ ಪಡೆದು, ದಾರವಾಡ ಜನತಾ ಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಹಾಗೂ ವಕೀಲರಾಗಿ ವ್ರುತ್ತಿಯನ್ನು ಆರಂಬಿಸಿ, ಬಾರ್ ಕೌನ್ಸಿಲ್ ಪರೀಕ್ಶೆಯಲ್ಲಿ ಪ್ರತಮ ಸ್ತಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.

ದಾರವಾಡದಿಂದ ಲೋಕಸಬೆಗೆ 4 ಬಾರಿ ಆಯ್ಕೆಯಾಗಿ ರಾಜ್ಯಸಬಾ ಸದಸ್ಯರಾಗಿಯೂ, ಮಾಜಿ ಪ್ರದಾನಮಂತ್ರಿ ದಿ. ಇಂದಿರಾಗಾಂದಿ ಅವರ ಸಂಪುಟದಲ್ಲಿ ಅಣುಶಕ್ತಿ ಹಾಗೂ ಸಂಕ್ಯಾಶಾಸ್ತ್ರ ಸಂಸ್ತೆಗಳ ಸಾರ‍್ವಜನಿಕ ಸಂಬಂದಗಳ ಕಾತೆಗಳ ಉಪಮಂತ್ರಿಯಾಗಿ, ಪ್ರವಾಸೋದ್ಯಮ, ವಿಮಾನಯಾನ, ಕಾನೂನು ಮತ್ತು ಕಂಪನಿ ವ್ಯವಹಾರ ಕಾತೆಗಳ ಸಚಿವರಾಗಿ ಸಮರ‍್ತವಾಗಿ ಕರ‍್ತವ್ಯ ನಿರ‍್ವಹಿಸಿದ್ದಾರೆ. ಅಲ್ಲದೆ 1966-1983ರವರೆಗೆ ದೆಹಲಿ ಕರ‍್ನಾಟಕ ಸಂಗದ ಅದ್ಯಕ್ಶೆಯಾಗಿದ್ದರು. ಮಹಿಳಾ ಹೋರಾಟಗಾರ‍್ತಿಯರಲ್ಲಿ ಅಗ್ರಗಣ್ಯರಾಗಿ, ಕನ್ನಡ ನಾಡು-ನುಡಿ ಅಬಿವ್ರುದ್ದಿಗೆ ಟೊಂಕ ಕಟ್ಟಿ ಜನರ ಆಶೋತ್ತರ ಈಡೇರಿಸುವಲ್ಲಿ ಸಪಲತೆ ಕಂಡವರು. ಮಹಿಳೆಯರ ಏಳಿಗೆಗೆ ‘ವನಿತಾ ಸೇವಾ ಸಮಾಜ’ ಸ್ತಾಪಿಸಿ, ಬಡ ಹೆಣ್ಣು ಮಕ್ಕಳ ವ್ಯಾಸಾಂಗಕ್ಕೆ ಶಾಲೆ ತೆರೆದು ಶೈಕ್ಶಣಿಕ ವಾತಾವರಣವನ್ನು ಸ್ರುಶ್ಟಿಸಿದರು.

ಕರ‍್ನಾಟಕ ರಾಜ್ಯದಲ್ಲಿ ಕಾರ‍್ಯನಿರ‍್ವಹಿಸುತ್ತಿರುವ ರಾಜ್ಯ ಸರಕಾರಿ ಸಂಸ್ತೆ, ಕೇಂದ್ರ ಸರಕಾರಿ ಸ್ವಾಮ್ಯದ ಉದ್ದಿಮೆ/ಸಂಸ್ತೆಗಳು, ಬ್ಯಾಂಕ್‍ಗಳು ಹಾಗೂ ಇನ್ನಿತರೆ ಹಣಕಾಸು ಸಂಸ್ತೆಗಳು, ಕಾಸಗಿ ಉದ್ದಿಮೆ ಮತ್ತು ಬಹುರಾಶ್ಟ್ರೀಯ ಕಂಪನಿ (ಐಟಿ-ಬಿಟಿ ಕಂಪನಿಗಳು ಸೇರಿ)ಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ನು ನೀಡಬೇಕೆಂಬುದರ ಬಗ್ಗೆ ಅದ್ಯಯನ ನಡೆಸಿ, ಸಮಗ್ರ ವರದಿಯನ್ನು 1983ರಲ್ಲಿ ರಾಜ್ಯ ಸರ‍್ಕಾರಕ್ಕೆ ಸಲ್ಲಿಸಿದರು. ಇದರಲ್ಲಿ 59 ಶಿಪಾರಸುಗಳನ್ನು ಮಾಡಿದ್ದು, ಸರ‍್ಕಾರ ಇದರಲ್ಲಿನ 45 ಶಿಪಾರಸುಗಳನ್ನು ಅಂಗೀಕರಿಸಿತ್ತು. ಈ ವರದಿಯು “ಡಾ. ಸರೋಜಿನಿ ಮಹಿಶಿ ವರದಿ” ಎಂದೇ ಕ್ಯಾತವಾಗಿದೆ. ಈ ವರದಿ ಕನ್ನಡ ನಾಡಿಗೆ ಮಾತ್ರ ಸೀಮಿತವಾಗದೆ, ಇತರೆ ರಾಜ್ಯಗಳಿಗೂ ಮಾದರಿ ವರದಿ ಎನಿಸಿದೆ.

ಕನ್ನಡ ಸಾಹಿತ್ಯ ಮತ್ತು ಸಂಸ್ಕ್ರುತಿಗೆ ಇವರ ಕೊಡುಗೆ ಅಪಾರವಾದುದು. ಇವರ ಮಕ್ಕಳ ಸಾಹಿತ್ಯ ಕ್ರುತಿಗಳಾದ ನವಿಲು, ಇಂಚರ ಮತ್ತು ರೂಪ ಕತಾ ಸಂಕಲನ, ಸ್ವಾತಂತ್ರ್ಯ ಕಹಳೆ, ಹಿಮಾಚಲದಿಂದ ರಾಮೇಶ್ವರ ಕವನ ಸಂಕಲನಗಳನ್ನು ರಚಿಸಿದ್ದಾರೆ. ಮರಾಟಿ ಬಾಶೆಯ ‘ಶಾಂಕುಂತಲಾ’ ವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ” ಮತ್ತು ಕುವೆಂಪುರವರ “ಶ್ರೀರಾಮಾಯಣ ದರ‍್ಶನಂ” ಕ್ರುತಿಗಳನ್ನು ಕನ್ನಡದಿಂದ ಹಿಂದಿಗೆ ತರ‍್ಜುಮೆ ಮಾಡಿದ್ದರು.

ಇವರಿಗೆ ಸಂದ ಪ್ರಶಸ್ತಿಗಳು – ಕರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2006ರಲ್ಲಿ ಪ್ರತಿಶ್ಟಿತ ನಾಡೋಜ, ಹಿಂದಿ ಪ್ರದೇಶದ ವ್ಯಕ್ತಿಗಳಿಗೆ ನೀಡುವ ಅತ್ಯುನ್ನತವಾದ ಪ್ರಶಸ್ತಿ “ಹಿಂದಿ ರತ್ನ ಸಮ್ಮಾನ್” ಮತ್ತು ಕರ‍್ನಾಟಕ ವಿಶ್ವವಿದ್ಯಾಲಯದಿಂದ ಗೌರವ “ಡಿ.ಲಿಟ್”. ಕರ‍್ನಾಟಕ ವಿಶ್ವವಿದ್ಯಾಲಯ, ವಿಜಯಾಪುರ ವಿಶ್ವವಿದ್ಯಾಲಯ, ಉಜ್ಜಯಿನಿ ಮತ್ತು ಹಂಪಿ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಕನ್ನಡಿಗರಿಗೆ ಕಾಸಗಿ ಮತ್ತು ಕೇಂದ್ರ ಸರಕಾರಿ ಉದ್ದಿಮೆ/ಸಂಸ್ತೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವಂತೆ ಹೇಳುವ ಇವರ ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸಂಪೂರ‍್ಣವಾಗಿ ಅನುಶ್ಟಾನಗೊಳಿಸುವ ಮೂಲಕ, ಸರಕಾರವು ಡಾ. ಸರೋಜಿನಿ ಮಹಿಶಿ ಅವರ ನೆನಪನ್ನು ಜೀವಂತವಾಗಿಡುವ ಕೆಲಸ ಆಗಬೇಕಾಗಿದೆ.

( ಚಿತ್ರ ಸೆಲೆ : thehindu.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: