ಪ್ರಾಜೆಕ್ಟ್ ಆರಾ – ಮಾಹಿತಿ ಚಳಕದ ಹೊಂಗನಸು!

ಪ್ರವೀಣ ಪಾಟೀಲ.

ನಿಮ್ಮಲ್ಲಿರುವ ಎಣ್ಣುಕದ ಬಿಡಿತುಣುಕುಗಳನ್ನು (components) ಮೇಲ್ಮಟ್ಟಕ್ಕೆ ಏರಿಸುವುದನ್ನು ಕೇಳಿದ್ದೀರಿ. ಸಾಮಾನ್ಯವಾಗಿ RAM ಮತ್ತು ಹಾರ‍್ಡ್ ಡಿಸ್ಕ್ ಗಳನ್ನು ಕೆಲವು ದಿನಗಳಾದಮೇಲೆ, ಹೊಸ ಬಳಕಗಳು (applications) ಮಾರುಕಟ್ಟೆಯಲ್ಲಿ ಬರುತ್ತಿದ್ದಹಾಗೆ, ತುಣುಕುಗಳನ್ನು ಮೇಲ್ಮಟ್ಟಕ್ಕೆ ಏರಿಸಲೇಬೇಕಾಗುತ್ತದೆ. ಅದೇ ನಿಟ್ಟಿನಲ್ಲಿ ಹಲವಾರು ಎಣ್ಣುಕ ಕೂಟಗಳು ಕೊಳ್ಳುಗರಿಗೆ ಆ ಆಯ್ಕೆಯನ್ನು ಕೊಟ್ಟಿದ್ದಾರೆ.

ಇದೇ ಒಂದು ಕಾರಣದಿಂದ ಎಣ್ಣುಕ ಕಯ್ಗಾರಿಕೆ ಬಹುದೂಡ್ದ ಯಶಸ್ಸನ್ನು ಕಂಡಿದ್ದು ಜಗತ್ತೇ ಗಮನಿಸಿದೆ. ಅದೇ ರೀತಿ ನಿಮ್ಮ ಕಿಸೆಯಲ್ಲಿರುವ ಜಾಣುಲಿಗೂ (smart phone) ಕಾಲ ಕಳೆದಂತೆ ಅದನ್ನು ಕೂಡ ಮೇಲ್ಮಟ್ಟಕ್ಕೆ ಏರಿಸಬಹುದೆಂದರೆ ನಂಬಲು ಸಾದ್ಯವೇ?

DSCF2084-2.0ನೀವು ನಿಮ್ಮ ಜಾಣುಲಿಯಲ್ಲಿ ಆಟವಾಡಬೇಕೆಂದರೆ, ಜಾಣುಲಿಯ ಎಸಕು ತ್ರಾಣ (processing power) ಒಂದೇ ನಿಮಿಶದಲ್ಲಿ ಬ್ಯಾಟರಿ ಬದಲಿಸಿದಶ್ಟು ಸಲೀಸಾಗಿ ಹೆಚ್ಚಿಸಬಹುದೆಂದರೆ ನಂಬುತ್ತೀರ? ಮುಂದಿನ ದಿನಗಳಲ್ಲಿ ಇದೆಲ್ಲ ಸಾದ್ಯವಾದರೆ ಅಚ್ಚರಿ ಪಡಬೇಡಿ. ಗೂಗಲ್ ನವರ ಹೊಚ್ಚ ಹೊಸ ಪ್ರಾಜೆಕ್ಟ್ ಆರಾ ಇದನ್ನು ನನಸಾಗಿಸಲು ಮುಂಗಾಲಿಟ್ಟಿದೆ.

ಬಹಳ ವರುಶಗಳಿಂದ ಎಣ್ಣುಕವು ತನ್ನ ಕೆಲಸದ ಮಟ್ಟವನ್ನು ಬದಲಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿದ್ದರಿಂದ ಎಲ್ಲೆಡೆ ಮೆಚ್ಚುಗೆಗೆ ಸಯ್ ಎನಿಸಿಕೊಂಡಿದೆ. ಆದರೆ ಜಾಣುಲಿಗಳಲ್ಲಿ ಈ ಆಯ್ಕೆಯು ಇಲ್ಲದಾದರಿಂದ ಕೊಳ್ಳುಗರು ಕಾಲ ಕಳೆದಂತೆ ಹೊಸ ಜಾಣುಲಿ ಕೊಂಡುಕೊಳ್ಳುವ ಸ್ತಿತಿ ಬೆಳೆದು ನಿಂತಿದೆ.

DSCF2102-2.0ಈ ಸವಾಲನ್ನು ಎದುರಿಸಲು ಗೂಗಲ್ ಈಗ ಪಣತೊಟ್ಟು ನಿಂತಂತಿದೆ. ಪ್ರಾಜೆಕ್ಟ್ ಆರಾ ಮೂಲಕ ಜಾಣುಲಿಯ ಬೆಲೆಯನ್ನು 50 ಡಾಲರಕ್ಕೂ ಕಮ್ಮಿಯ ಬೆಲೆಯಲ್ಲಿ ಮಂದಿಗೆ ದೊರೆಯುವ ಹಾಗೆ ಮಾಡುವ ಗುರಿಯನ್ನು ಗೂಗಲ್ ಹೊಂದಿದೆ. ಕಮ್ಮಿ ಬೆಲೆಯಲ್ಲಿ ನೀವು ನೇರಮೂಲೆಯ ‘ಅಟ್ಟೆಯನ್ನು’ ಕೊಂಡು ನಿಮ್ಮ ಅನುಕೂಲಕ್ಕೆ ತಕ್ಕನಾಗಿ ನಿಮ್ಮದೆಯಾದ ಜಾಣುಲಿಯನ್ನು ಸಿದ್ದಪಡಿಸಬಹುದು.

ದೊಡ್ಡತೆರೆ, ಒಳ್ಳೇ ತಿಟ್ಟಕ (camera), ಹೆಚ್ಚನೆಯ ಎಸಕು ತ್ರಾಣ, ದಿನವಿಡೀ ಜಾಣುಲಿಯನ್ನು ಬಳಸಲು ದೊಡ್ಡ ಮಿಂಕಟ್ಟು (battery), ಮತ್ತು ಇತರ ತುಣುಕುಗಳನ್ನು ನಿಮ್ಮ ಇಶ್ಟದಂತೆಯೆ ಕೂಡಿಸಿ ಹೊಸ ಜಾಣುಲಿಯನ್ನು ಕಟ್ಟಬಹುದು. ಇದೆಲ್ಲ ಕೇಳಿದ ನಿಮಗೆ, ಇದು ವಿಕಾರವಾಗಿದ್ದು ಬಳಸಲು ಕಶ್ಟವಾಗಿದೆ ಎಂದುಕೊಂಡಿದ್ದರೆ ನಿಮಗೆ ಅಚ್ಚರಿ ಕಾದಿದೆ. ಇಶ್ಟೆಲ್ಲಾ ಏರ‍್ಪಾಡಿದ್ದರೂ ಕೂಡ ನೊಡೋದಕ್ಕೆ ಸಾಮಾನ್ಯ ಜಾಣುಲಿಯ ಹಾಗೆ ಇದ್ದು ಇತರೆ ಜಾಣುಲಿಗಳಿಗೆ ಹೋಲಿಸಿದರೆ ಅಶ್ಟೇನು ಬೇರೆಯಾಗಿಲ್ಲ

Project Ara

ಇದೊಂದು ಒಳ್ಳೆಯ ಬೆಳವಣಿಗೆ ಅಲ್ಲವೇ? ಮಂದಿಗೆ ತಮ್ಮ ಹಳೆಯ ಜಾಣುಲಿಯ ಹಾಗೆ ಇದ್ದರೆ ಬಳಸಲಿಕ್ಕೆ ಸರಾಗವಾಗುತ್ತದೆ ಮತ್ತು ಈ ನಿಟ್ಟಿನಲ್ಲಿ ಗೂಗಲ್ ಗೆದ್ದಿದೆ ಎಂದರೆ ತಪ್ಪಾಗಲಾರದು. ಇಂತಹ ದೊಡ್ಡ ಮಟ್ಟದ ಕೆಲಸ ಬರಿ ಗೂಗಲ್ನಿಂದ ಸಾದ್ಯವೆಂದರೆ ಅದು ಪೊಳ್ಳು ಹೊಗಳಿಕೆಯಾಗಬಹುದು. ‘ಪ್ರಾಜೆಕ್ಟ್ ಆರಾ’ ಹೊರಬರಲು ಗೂಗಲ್ ಜೊತೆ ಲಿನಾರೊ ಕೂಟ ಮಾತ್ತು ಹಲವಾರು ಕೂಟಗಳು ಸೇರಿಕೊಂಡು ಈ ಕನಸನ್ನು ನನಸು ಮಾಡಲು ಹೊರಟಿದ್ದಾರೆ.

ಈಗಾಗಲೇ ಮಾಹಿತಿ ಚಳಕ ವಲಯದಲ್ಲಿ ಸಾಕಶ್ಟು ಸದ್ದು ಮಾಡಿ ಆಪಲ್ ಹಾಗೂ ಸ್ಯಾಮ್‍ಸಂಗ್ ಕೂಟಗಳಿಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಇದಕ್ಕೆ ತಿರುಗೇಟು ನೀಡಲು ಉಳಿದ ಕೂಟಗಳು ಏನು ಮಾಡುತ್ತವೆಯೆಂದು ನೋಡಲು ಕೊಳ್ಳುಗರು ಕಾತುರದಿಂದ ಕಾಯುತ್ತಿದ್ದಾರೆ.

(ತಿಟ್ಟಸೆಲೆ: theverge.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.