‘ಹುರಿದ ಕುರಿಮಾಂಸ’ ಮಾಡುವ ಬಗೆ

ರೇಶ್ಮಾ ಸುದೀರ್.
Kuri

ಬೇಕಾಗುವ ಅಡಕಗಳು:

ಕುರಿಮಾಂಸ—-1/2 ಕೆಜಿ
ನೀರುಳ್ಳಿ——-1 (ಸಣ್ಣ ಗಾತ್ರ)
ಟೊಮಾಟೊ—–1
ಬೆಳ್ಳುಳ್ಳಿ——–1 (ದೊಡ್ದಗಾತ್ರ)
ಚಕ್ಕೆ———-1/2 ಇಂಚು
ಲವಂಗ——–2
ಏಲಕ್ಕಿ———1
ಅಚ್ಚಕಾರದ ಪುಡಿ–2 ಟಿ ಚಮಚ
ದನಿಯ ಪುಡಿ—–1/2 ಟಿ ಚಮಚ
ಪುದಿನ ಸೊಪ್ಪು ಹೆಚ್ಚಿದ್ದು–ಸ್ವಲ್ಪ
ಕೊತ್ತಂಬರಿ ಸೊಪ್ಪು ಹೆಚ್ಚಿದ್ದು–ಸ್ವಲ್ಪ
ಎಣ್ಣೆ———1 ಟೇಬಲ್ ಚಮಚ
ಉಪ್ಪು ರುಚಿಗೆ ತಕ್ಕಶ್ಟು
ನಿಂಬೆರಸ–1 ಟಿ ಚಮಚ

ಮಾಡುವ ಬಗೆ:

ಟೊಮಟೊ ಹಾಗು ನೀರುಳ್ಳಿಯನ್ನು ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಬಿಡಿಸಿಕೊಂಡು ಅದರಲ್ಲಿ ಅರ‍್ದ ಜಜ್ಜಿಕೊಂಡು, ಇನ್ನರ‍್ದ ಹಾಗೆ ಇಟ್ಟುಕೊಳ್ಳಿ. ಕುಕ್ಕರ್ ಬಿಸಿಗಿಟ್ಟು ಎಣ್ಣೆ ಹಾಕಿ, ಕಾದ ಎಣ್ಣೆಗೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ. ಬಳಿಕ ನೀರುಳ್ಳಿ ಹಾಕಿ ಬಾಡಿಸಿ ಕೊಳ್ಳಿ. ಬಳಿಕ ಟೊಮಾಟೊ ಹಾಕಿ ಬಾಡಿಸಿ ಕೊಳ್ಳಿ. ಮತ್ತೆ ಜಜ್ಜಿ ಇಟ್ಟ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಶುಚಿಮಾಡಿದ ಕುರಿಮಾಂಸ ಹಾಕಿ ಉಪ್ಪು, ಚಿಟಿಕೆ ಅರಿಶಿನಪುಡಿ ಹಾಕಿ. ಮಾಂಸದ ನೀರು ಆರುತ್ತಾ ಬರುವಾಗ ಕಾರದ ಪುಡಿ, ದನಿಯ ಪುಡಿ ಹಾಕಿ ಹುರಿಯಿರಿ, ಬೆಳ್ಳುಳ್ಳಿ ಎಸಳು ಹಾಕಿ, 2 ಲೋಟ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ವಿಶಲ್ ಕೂಗಿಸಿ. (ಮಾಂಸ ಗಟ್ಟಿಯಾಗಿದ್ದರೆ ಇನ್ನು 2 ವಿಶಲ್ ಕೂಗಿಸಿ). ಕುಕ್ಕರ್ ಇಳಿಸಿದ ಮೇಲೆ ಮಾಂಸದಲ್ಲಿ ನೀರು ಇದ್ದರೆ ಒಲೆಯ ಮೇಲೆ ಇಟ್ಟು ನೀರು ಆರಿಸಿ. ಕೊತ್ತಂಬರಿ ಹಾಗು ಪುದಿನ ಸೊಪ್ಪು ಹಾಕಿ ಸ್ವಲ್ಪ ಹುರಿದು 1 ಟಿ ಚಮಚ ನಿಂಬೆರಸ ಹಾಕಿ ಇಳಿಸಿ. ಅಕ್ಕಿ ರೊಟ್ಟಿಯೊಂದಿಗೆ ಇದು ಚೆನ್ನಾಗಿ ಹೊಂದುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: