ಜೀವಿಗಳಿಗೆ ಎಶ್ಟು ನಿದ್ದೆ ಅಗತ್ಯವಿದೆ?

– ಡಾ. ರಾಮಕ್ರಿಶ್ಣ ಟಿ.ಎಮ್.

Animals-Sleep-chirathe

ನಿದ್ದೆ ಮಾಡುವುದು ಪ್ರಾಣಿಗಳ ನಿತ್ಯ ಜೀವನದ ಒಂದು ಪ್ರಮುಕವಾದ ಬಾಗ. ಸಾಮಾನ್ಯವಾಗಿ ನಿದ್ದೆಯಿಲ್ಲದೆ ದಿನ ನಿತ್ಯದ ಜೀವನ ಸಾಗಿಸುವುದು ಕಶ್ಟ. ಎಲ್ಲಾ ಪ್ರಾಣಿಗಳಿಗೂ ನಿದ್ದೆ ಅತ್ಯಗತ್ಯ, ದಿನದಲ್ಲಿ ಒಮ್ಮೆಯಾದರೂ ಅವು ನಿದ್ರೆಗೆ ಶರಣಾಗುತ್ತವೆ. ಕ್ಯಾಲಿಪೋರ‍್ನಿಯಾ ವಿಶ್ವವಿದ್ಯಾಲಯದ ಡೆನಿಯಲ್ ಕ್ರಿಪ್ಕೆ (Daniel kripke) ಎಂಬ ವಿಜ್ನಾನಿ ವಿಶ್ವದಾದ್ಯಂತ, 1.1 ಮಿಲಿಯನ್ ಜನರ ಸಂದರ‍್ಶನ ಮಾಡಿ, ಸುಮಾರು ಆರು ವರ‍್ಶಗಳು ನಡೆಸಿದ ಸಂಶೋದನೆ. ಅದರ ಪ್ರಕಾರ 8 ಗಂಟೆ ಅತವಾ ಹೆಚ್ಚು ಕಾಲ ನಿದ್ದೆ ಮಾಡುವ ಯುವಕರು ಬೇಗ ಸಾವನ್ನು ಅಪ್ಪುತ್ತಾರೆ. ಹಾಗೇಯೆ 6 ಗಂಟೆ ಅತವಾ 7 ಗಂಟೆ ನಿದ್ದೆ ಮಾಡುವ ಯುವಕರು ಹೆಚ್ಚು ಕಾಲ ಬದಕುತ್ತಾರೆ ಎಂಬ ಸತ್ಯವನ್ನು ಕ್ರಿಪ್ಕೆ ತನ್ನ ಪ್ರಾಯೋಗಿಕ ಪರೀಕ್ಶೆಗಳಿಂದ ತಿಳಿಸಿದ್ದಾರೆ.

1900 ರಲ್ಲಿ ಬ್ರಿಟನ್ ದೇಶದಲ್ಲಿ, ಜನರು ಸುಮಾರು 9 ಗಂಟೆಗಳು ಎಡೆಬಿಡದೇ ನಿದ್ದೆ ಮಾಡುತ್ತಿದ್ದರೆಂದು ಮತ್ತು ಈಗಿನ ಪೀಳಿಗೆಯವರು 6 ರಿಂದ 7 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆಂದು ಅಬಿಪ್ರಾಯವಿದೆ. ಸಾಮಾನ್ಯವಾಗಿ, ಆರೋಗ್ಯವಂತ ಮಾನವನಿಗೆ 5 ರಿಂದ 6 ಗಂಟೆಗಳ ನಿದ್ದೆ ಮತ್ತು ವಯಸ್ಸಾದರು ಮತ್ತು ಮಕ್ಕಳಿಗೆ 7 ರಿಂದ 8 ಗಂಟೆಗಳು ನಿದ್ದೆ ಬೇಕಾಗುತ್ತದೆ. ಅನೇಕ ವಿಶೇಶವಾದ ಸಂಗತಿಗಳು ಹೀಗಿವೆ: ಮನುಶ್ಯ ಮಲಗಿದ ನಂತರದ 7 ನಿಮಿಶಗಳಲ್ಲಿ ನಿದ್ರೆ ಆವರಿಸುತ್ತದೆ. ಆರೋಗ್ಯವಂತ ಮನುಶ್ಯ ನಿದ್ದೆಯಲ್ಲಿ 15 ರಿಂದ 35 ಬಾರಿ ಎಚ್ಚರಗೊಳ್ಳುತ್ತಾನೆ.

ಮನುಶ್ಯರು ನಿದ್ದೆ ಮಾಡುವುದರಲ್ಲಿ 84 ವಿವಿದ ರೀತಿಯ ನಿದ್ದೆ ವ್ಯತಿರೇಕಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದಾಹರಿಸಲಾಗಿದೆ- 1) ಹೆಚ್ಚು ಗೊರಕೆ 2) ಹಗಲಿನಲ್ಲಿ ನಿದ್ದೆ ಮಾಡುವುದು 3) ಗಾಡ ನಿದ್ದೆಯ ರೋಗ 4) ನಿದ್ದೆ ಮಾಡುವಾಗ ಉಸಿರು ಕಟ್ಟುವುದು (apnoea) ಮತ್ತು 5) ನಿದ್ದೆ ಮಾಡುವಾಗ ಕಾಲುಗಳನ್ನು ಚಲಿಸುವುದು (restless leg syndrome ) ಹೀಗೆ ಹಲವಾರು ವ್ಯತಿರೇಕಗಳು.

ನಿದ್ದೆ ಮಾಡುವುದರಲ್ಲಿ ಲಿಯೋನಾರ‍್ಡ್ ಡಾವಿನ್ಸಿ (Leonard da vinci) ಜೀವನದ ಅರ‍್ದ ಆಯಸ್ಸು ಕಳೆದರೆಂದು, ಹಾಗೆಯೇ ಐನ್‍ಸ್ಟೀನ್ (Einstein) ಒಬ್ಬ ಮೇದಾವಿ ವಿಜ್ನಾನಿ, ಹಗಲಲ್ಲಿ ಪ್ರತಿ 4 ಗಂಟೆಗಳಿಗೊಮ್ಮೆ, 15 ನಿಮಿಶಗಳ ಕಾಲ ಸಣ್ಣ ನಿದ್ದೆ ಮಾಡುತ್ತಿದ್ದರೆಂದು ತಿಳಿದಿದೆ. ಅಪ್ರತಿಮ ನಿಗಂಟು ರಚನೆಕಾರರಾದ (ಅತವಾ ಲ್ಯಾಕ್ಸಿಕೋಗ್ರಾಪ್ರ್ Laxicogropher) ಡಾ|| ಜಾನ್ಸನ್ (Jhonson) ಪ್ರತಿದಿವಸ ಮದ್ಯಾಹ್ನದ ಹೊತ್ತು ನಿದ್ದೆ ಮಾಡುತ್ತಿದ್ದ. ಹಾಗೆಯೇ ಪ್ರಸಿದ್ದ ಪಿಲಾಸಪರ್, ಪಾಸ್ಕಲ್ (Pascal) ಹಗಲು ಹೊತ್ತು ಮಂಚದ ಮೇಲೆ ಮಲಗಿ ಸುದೀರ‍್ಗ ನಿದ್ದೆ ಮಾಡುತ್ತಿದ್ದನೆಂದು ತಿಳಿದಿದೆ.

ಪ್ರಾಣಿಗಳು ವಿವಿದ ರೀತಿಯಲ್ಲಿ ನಿದ್ದೆ ಮಾಡುತ್ತವೆ: ಸುಮಾರು 50-70 ವರ‍್ಶಗಳ ಕಾಲ ಜೀವಿಸುವ ಆನೆ ಕೇವಲ 2 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತದೆ. ಅತಿ ಹೆಚ್ಚು ನಿದ್ದೆ ಮಾಡುವ ಕೊಲ್ಹಾ ಪ್ರಾಣಿ ದಿನದ 22 ಗಂಟೆಗಳು ನಿದ್ದೆ ಮಾಡುವುದರಲ್ಲಿ ತೊಡಗಿಸಿಕೊಂಡಿರುತ್ತದೆ. ಅದರೆ ಆದರ ಆಯಸ್ಸು ಬರಿ 10 ವರ‍್ಶಗಳು ಮಾತ್ರ. ಇರುವೆಗಳೂ ಸಹ ಹಲವು ನಿಮಿಶಗಳ ಕಾಲ ಆದರೆ ಹಗಲು ಹೊತ್ತಿನಲ್ಲಿ ಮಾತ್ರ ನಿದ್ರಿಸುತ್ತವೆ.

ಇತ್ತೀಚಿನ ವರ‍್ಶಗಳಲ್ಲಿ ವಾಹನ ಚಾಲಕರಿಂದ ಸಾವಿರಾರು ಅನಾಹುತಗಳು ಆಗುತ್ತಿವೆ. ವಾಹನ ಚಾಲನೆ ಮಾಡುವಾಗ ನಿದ್ದೆಗೆ ಜಾರುವುದು ಅತವಾ ಹಿಡಿತಕ್ಕೆ ಸಿಗದ ಅತಿಯಾದ ವೇಗ, ಅತವಾ ವಿಶ್ರಾಂತಿಯಿಲ್ಲದೆ ವಾಹನ ಚಾಲನೆ ಮಾಡುವುದು ಅತವಾ ವಿಕಾರ ಮನಸ್ತಿತಿ ಅಪಗಾತಗಳಿಗೆ ಕಾರಣವಾಗಿವೆ. ಇಂತಹ ಸಮಯದಲ್ಲಿ ವಾಹನ ಚಾಲಕರು ಸಾಮಾನ್ಯವಾಗಿ ಹೆಚ್ಚು ಚಹ ಸೇವಿಸುವುದು ಅತವಾ ಗುಟ್ಕ ಸೇವಿಸುವುದು ನಿತ್ಯದ ಅಬ್ಯಾಸವಾಗಿರುತ್ತದೆ. ಅತಿ ಹೆಚ್ಚು ಚಹಾ ಅತವಾ ಗುಟ್ಕ ಸೇವನೆ ಅರೋಗ್ಯದ ದ್ರುಶ್ಟಿಯಿಂದ ಒಳ್ಳೆಯದಲ್ಲ. ಗುಟ್ಕ ಕ್ಯಾನ್ಸರ್ ಗೆ ಎಡೆಮಾಡಿಕೊಡುತ್ತದೆ. ಅದಕ್ಕೆ ಬದಲು ಒಂದು ಸೇಬಿನ ಹಣ್ಣು ಸೇವಿಸುವುದು ಸೂಕ್ತವೆಂದು ಹೇಳಲಾಗುತ್ತದೆ.

ಸೇಬು ಆಹಾರವನ್ನು ಅರಗಿಸಲು ನೆರವಾಗುತ್ತದೆ. ಮತ್ತು ಹಂತ ಹಂತವಾಗಿ ಶಕ್ತಿಯನ್ನು ಹೊರಹಾಕುತ್ತದೆ, ಆದಕಾರಣ ನಿದ್ದೆ ಮುಂದೂಡಲ್ಪಡುತ್ತದೆ. ಸೇಬು ತಿನ್ನುವುದು ಕಾಪಿ ಅತವಾ ಟೀ ಸೇವನೆ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಾತ್ರಿ ವೇಳೆಯಾಗಲಿ ಅತವಾ ಹಗಲು ವೇಳೆಯಾಗಲಿ ಚಾಲಕರು ನಿದ್ದೆಯನ್ನು ಮುಂದೂಡಲು ಗುಟ್ಕ ಬಳಸುವುದನ್ನು ಬಿಟ್ಟು ಸೇಬು ಹಣ್ಣು ತಿನ್ನುವುದು ಸೂಕ್ತವೆಂದು ಮತ್ತು ಹೆಚ್ಚು ಪ್ರಯೋಜನಕಾರಿಯೆಂದು ಪರಿಗಣಿಸಲಾಗಿದೆ.

(ಚಿತ್ರಸೆಲೆ: humanophiles.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.