ಹೊರಮಾರುಗೆಯನ್ನು ಹೆಚ್ಚಾಗಿ ನೆಚ್ಚಿರುವ ನಾಡುಗಳು

– ಅನ್ನದಾನೇಶ ಶಿ. ಸಂಕದಾಳ.

ಒಂದು ನಾಡಿನ ಹಣಕಾಸಿನ ಸನ್ನಿವೇಶವನ್ನು ಮೇಲೆತ್ತುವಲ್ಲಿ ಹೊರಮಾರುಗೆಯ (Export) ಪಾತ್ರ ಮುಕ್ಯವಾಗಿದೆ. ಹೊರಮಾರುಗೆಯು ಹೆಚ್ಚಿದಂತೆ ನಾಡಿನಲ್ಲಿ ಹೆಚ್ಚು ಹೆಚ್ಚು ಕೆಲಸಗಳು ಹುಟ್ಟುತ್ತಾ ಕೆಲಸವಿಲ್ಲದಿಕೆ (unemployment) ಕಡಿಮೆಯಾಗುತ್ತದೆ.

ನಾಡುಗಳ ಒಟ್ಟು ಹೊರಮಾರುಗೆಯನ್ನು ಲೆಕ್ಕ ಮಾಡಲು ಆ ನಾಡಿನಲ್ಲಿನ – ಸರಕುಗಳು, ಮಾರುಕಟ್ಟೆಯಲ್ಲಿನ ಸೇವೆಗಳು, ಸರಕು ಸಾಗಾಣಿಕೆಯ ಬೆಲೆ, ಹಣಕಾಸಿನ ಸ್ತಿತಿ – ಇವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇವೆಲ್ಲದರ ನೆಲೆಯ ಮೇಲೆ 2013 ರಲ್ಲಿ ವರ‍್ಲ್ಡ್ ಬ್ಯಾಂಕ್ ತಿಳಿಹವನ್ನು (data) ಕಲೆ ಹಾಕಿದೆ. ಹೊರಮಾರುಗೆಯನ್ನು ‘ಒಟ್ಟು ಮಾಡುಗೆಯ ಬೆಲೆ’ ಯ (ಒ.ಮಾ.ಬೆ – GDP) ಶೇಕಡಾವಾರು ಲೆಕ್ಕದ ನೆಲೆ ಮೇಲೆ ನಾಡುಗಳನ್ನು ಪಟ್ಟಿ ಮಾಡಲಾಗಿದೆ.

export

ಆ ಪಟ್ಟಿಯಲ್ಲಿ ಹಾಂಗ್ ಕಾಂಗ್ ನಾಡು ಮೊದಲನೇ ಸ್ತಾನದಲ್ಲಿದೆ. ಹಾಂಗ್ ಕಾಂಗ್ ನ ಹೊರಮಾರುಗೆಯು, ಆ ನಾಡಿನ ಒ.ಮಾ.ಬೆ ಯ ಶೇ 227 ರಶ್ಟಿದೆ. ಲಕ್ಸೆಂಬರ‍್ಗ್ ನಾಡು ಎರಡನೇ ಸ್ತಾನದಲ್ಲಿದ್ದು, ಅದರ ಹೊರಮಾರುಗೆಯು ಆ ನಾಡಿನ ಒ.ಮಾ.ಬೆ ಯ ಶೇ 203 ರಶ್ಟಿದೆ. ಚೀನಾದ ಮಕಾವೋ ಐದನೇ ಸ್ತಾನದಲ್ಲಿದ್ದು, ಪಡುವಣ ಆಪ್ರಿಕಾದ ನಾಡಾದ ಗಿನಿ ಮೊದಲ ಹತ್ತರಲ್ಲಿ ಸ್ತಾನ ಪಡೆದಿದೆ.

ಯಾವ ಯಾವ ನಾಡುಗಳ ಹಣಕಾಸಿನ ಸ್ತಿತಿಯು ಹೊರಮಾರುಗೆಯನ್ನು ಹೆಚ್ಚಾಗಿ ನೆಚ್ಚಿದೆ ಎಂಬುದು ಈ ತಿಳಿಹದಿಂದ ಗೊತ್ತಾಗುತ್ತದೆ.

(ಚಿತ್ರ ಮತ್ತು ಮಾಹಿತಿ ಸೆಲೆ : agenda.weforum.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: