ಅರಿತು ಬಾಳಿದರೆ ಬದುಕು ನಲಿವ ಹೂರಣ

ಪ್ರತಿಬಾ ಶ್ರೀನಿವಾಸ್.

yamnoue

ಜಗತ್ತೆಂಬ ಈ ಜನ ಜಾತ್ರೆಯಲ್ಲಿ
ಎಲ್ಲವು ಬೇಕು ಎಲ್ಲರೂ ಬೇಕು
ಎಲ್ಲರೊಳಗೊಂದಾದರೇ ಜಗವೇ ಸ್ವರ‍್ಗ
ತನ್ನವರೊಡನೆಯೇ ಹೌಹಾರಿದರೆ ಇದುವೇ ನರಕ

ಪುಟ್ಟದಾಗಿ ಬಂದ ಈ ಜೀವಕ್ಕೆ
ಪುಟಗಟ್ಟಲೇ ವಿದ್ಯೆಯ ಕೊಟ್ಟು
ಪ್ರಪಂಚಕ್ಕೆ ಪರಿಚಯಿಸುವ
ಪ್ರಸ್ತಾವನೆಯೇ ತಂದೆ

ನೀರಿಲ್ಲದ ಈ ಬೇರಿಗೆ ನೀರುಣಿಸಿ
ನಯ-ವಿನಯವ ತಿಳಿಪಡಿಸಿ
ನಲ್ಮೆಯ ನಲಿವನ್ನು ಉಣಬಡಿಸಿ
ಸಾರ‍್ತಕತೆಯ ಜೀವನ ಕೊಟ್ಟವಳೇ ತಾಯಿ

ನಗುತ ಸುಕ-ದುಕವ ಹಂಚಿಕೊಳ್ಳುವ
ಹಾಗೊಮ್ಮೆ ಹೀಗೊಮ್ಮೆ ಮುನಿಸಿಕೊಳ್ಳುವ
ರಕ್ತ ಸಂಬಂದವಲ್ಲದ ಬಂದನ
ಇದುವೇ ಸ್ನೇಹವೆಂಬ ದಿಗ್ಬಂದನ

ಜೀವನದ ಬಂಡಿಯೋಡಲು
ಗಳಿಸಬೇಕು ಹಣ
ಗಳಿಕೆಯೇ ಜೀವನವಾದರೇ
ಬೀಳುವುದು ನಮ್ಮ ಹೆಣ

ಆಸೆಗಳ ಮಟ್ಟಿ ಮೀರಿ ನಿಂತವನೇ ಸುಗುಣ
ಅರಿತು ಬಾಳಿದರೆ ಬದುಕು ನಲಿವ ಹೂರಣ

(ಚಿತ್ರ ಸೆಲೆ: 8-principles-of-life )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: