ಗಣೇಶ ಹಬ್ಬದಲ್ಲಿ ತಯಾರಿಸುವ ಕರಿಗಡಬು

ಕಲ್ಪನಾ ಹೆಗಡೆ.

karigadabu
ಬೇಕಾಗುವ ಸಾಮಗ್ರಿಗಳು:
1 ಸೇರು ಚಿರೋಟಿ ರವೆ.
1 ಒಣ ಕೊಬ್ಬರಿ
2 ಸೇರು ಸಕ್ಕರೆ ಪುಡಿ
5 ಏಲಕ್ಕಿ ಪುಡಿ
ಎಣ್ಣೆ

ಮಾಡುವ ವಿದಾನ:
ಮೊದಲು ಚಿರೋಟಿ ರವೆಯನ್ನು 10 ನಿಮಿಶಗಳ ಕಾಲ ನೀರು ಹಾಕಿ ನೆನಸಿಡಿ. ಆನಂತರ ಅದಕ್ಕೆ ಚಿಟಿಕೆ (ರುಚಿಗೆ ತಕ್ಕಶ್ಟು) ಉಪ್ಪು, ಸ್ವಲ್ಪ ಎಣ್ಣೆ ಹಾಕಿ ಕಲಸಿಕೊಳ್ಳಿ. ಒಣಕೊಬ್ಬರಿಯನ್ನು ತುರಿದುಕೊಳ್ಳಿ. ಸಕ್ಕರೆಯನ್ನು ಹಾಗೂ ಕೊಬ್ಬರಿ ತುರಿಯನ್ನು ಬೇರೆಯಾಗಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಆನಂತರ ಕೊಬ್ಬರಿಪುಡಿ, ಏಲಕ್ಕಿ ಪುಡಿ ಹಾಗೂ ಸಕ್ಕರೆ ಪುಡಿಯನ್ನು ಕಲಸಿಕೊಳ್ಳಿ. ಕಲಸಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಣಗೆಯಿಂದ ತೆಳ್ಳಗೆ ಒರೆದುಕೊಳ್ಳಿ. ಅದರಮೇಲೆ ನೀವು ಮಿಕ್ಸಿಗೆ ಹಾಕಿ ಕಲಸಿದ್ದ ಕೊಬ್ಬರಿ ಸಕ್ಕರೆ ಪುಡಿಯನ್ನು ಹಾಕಿ. ಬಳಿಕ ಒರೆದುಕೊಂಡ ಹಿಟ್ಟನ್ನು ಎಲ್ಲೂ ಒಡೆಯದ ಹಾಗೆ ಮಡಿಕೆ ಮಾಡಿ, ಮಡಿಕೆಯ ತುದಿಗಳನ್ನು ಜೋಡಿಸಿ ಒಂದಕ್ಕೊಂದು ಅಂಟುವಂತೆ ಒತ್ತಿರಿ. ಆನಂತರ ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಸಾಮನ್ಯ ಉರಿಯಲ್ಲಿ ಕರಿದರೆ ಗರಿ ಗರಿ ಆಗತ್ತೆ. ತಯರಿಸಿದ ಕರಿಗಡಬನ್ನು ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: