ನೀ ಸಿಗುವ ಮುನ್ನ

ಪ್ರತಿಬಾ ಶ್ರೀನಿವಾಸ್.

girl-wait
ನನ್ನೊಳಗಿನ ಈ ತವಕ ನಿನ್ನ ಹುಡುಕುತಿದೆ
ನಿನ್ನ ಬರುವಿಕೆಗಾಗಿ ಮನ ಹಂಬಲಿಸುತ್ತಿದೆ
ನಿನ್ನ ಕನಸುಗಳು ನನ್ನೆದೆಯ ಕಂಪಿಸುತ್ತಿದೆ
ಕಾಲಿ ಮನಸ್ಸಲಿ ಆಸೆಗಳು ಚಲಿಸುತಿದೆ

ಮಿಡುಕಾಡುತಿಹುದು ಈ ನನ್ನ ಜೀವ
ನೀರ ಮೇಲಿನ ಮೀನಿನಂತೆ
ಕೊರಗುತಾ ಕರಗುತಿದೆ ಆಸೆಗಳು
ಮುಕ್ತಾಯದ ಹಂತದ ಮೇಣದ ಬತ್ತಿಯಂತೆ

ಮನಸ್ಸೆಂಬ ಮನೆಯಲ್ಲಿ ಗೊಂದಲವೆಂಬ
ಕಹಳೆಯು ಕೇಳುತಿಹುದು
ಸಂಶಯವೆಂಬ ಸಮುದ್ರದ ಅಲೆಗಳು
ನನ್ನೆದೆಯಲಿ ಬೀತಿ ಹುಟ್ಟಿಸುತಿಹುದು

ಬಲಗಾಲಿಟ್ಟು ಮನದೊಳಗೆ ಬರುವೆಯಾ
ಬರಿಗಾಲಲ್ಲಿ ಮನಕ್ಕೊದ್ದು ಹೊಗುವೆಯಾ
ನಿನ್ನವಳಾಗಬೇಕೆಂಬ ಬಯಕೆ ಅತಿಯಾಗಿದೆ
ಜೀವನವೆಂಬ ಪುಟದಲ್ಲಿ ಬರಹ ಮಿತಿಮೀರಿದೆ

ಬಕ ಪಕ್ಶಿಯಂತೆ ಮುಂದುವರೆದಿದೆ ಕಾಯುವಿಕೆ
ಕಾಯುವಿಕೆಯಲ್ಲಿ ಜೀವ ಮಣ್ಣಾಗಬಹುದೆಂಬ ಅನಿಸಿಕೆ
ಸಾಕು ಈ ಜನ್ಮಕೆ ನಿನ್ನೊಲವಿನ ಪ್ರೀತಿ
ಇಶ್ಟವಾಯಿತೆ ನಿನಗೆ ಈ ನನ್ನ ಪ್ರೀತಿಯ ರೀತಿ?

(ಚಿತ್ರ ಸೆಲೆ: eyewillnotcry.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications