ನವರಾತ್ರಿ ಹಬ್ಬದ ತಿಂಡಿ ಸಬ್ಬಕ್ಕಿ ಉಪ್ಪಿಟ್ಟು

ಆಶಾ ರಯ್.

 

ನವರಾತ್ರಿ ಅಂದರೆ ಒಂಬತ್ತು ಇರುಳು ಎಂದು. ಈ ಹಬ್ಬದಲ್ಲಿ ದೇವಿಯ ಒಂಬತ್ತು ರೂಪವನ್ನು ಪೂಜಿಸುತ್ತಾರೆ. ಈ ಒಂಬತ್ತು ದಿನಗಳಲ್ಲಿ ಉಪವಾಸ ಮಾಡುವುದು ವಾಡಿಕೆ. ಸಬ್ಬಕ್ಕಿ ಉಪ್ಪಿಟ್ಟು ಉಪವಾಸ ಮಾಡುವಾಗ ಬಹಳ ಸುಲಬವಾಗಿ ಮಾಡಬಹುದಾದಂತ ಒಂದು ತಿಂಡಿ. ಮಾಡಿ ನೋಡಿ ಉಪವಾಸದ ಸಬ್ಬಕ್ಕಿ (ಸಾಬೂದಾನಿ) ಉಪ್ಪಿಟ್ಟು.

ಏನೇನು ಬೇಕು?
ಸಬ್ಬಕ್ಕಿ: 1 ಲೋಟ
ಬಟಾಟೆ/ಆಲೂಗಡ್ಡೆ: 1
ಪುಡಿ ಮಾಡಿದ ಶೇಂಗಾ/ಕಡ್ಲೆಬೀಜ: 3 ಚಮಚ
ಸಕ್ಕರೆ: 1/2 ಚಮಚ
ಎಣ್ಣೆ: 1 ಚಮಚ
ಜೀರಿಗೆ: 1 ಚಮಚ
ಹಸಿಮೆಣಸು: 2-3
ಅರಿಶಿನ: 1/4 ಚಮಚ
ಉಪ್ಪು: ರುಚಿಗೆ ತಕ್ಕಶ್ಟು
ಕರಿಬೇವು: ಒಗ್ಗರಣೆಗೆ
ಕೊತ್ತಂಬರಿ ಸೊಪ್ಪು: 1 ಚಮಚ

ಮಾಡುವ ಬಗೆ:
1. ಸಬ್ಬಕ್ಕಿಯನ್ನು ರಾತ್ರಿ ನೆನೆಸಿಡಿ. ಸಬ್ಬಕ್ಕಿ ಮುಳುಗುವಶ್ಟೆ ನೀರು ಹಾಕಿ, ನೀರು ಹೆಚ್ಚಾದರೆ ಸಬ್ಬಕ್ಕಿ ಅಂಟಾಗುತ್ತದೆ.
2. ಬೆಳಗ್ಗೆ ಸಬ್ಬಕ್ಕಿ ಉದುರುದುರಾಗಿ ಮೆತ್ತಗಾಗುತ್ತದೆ. ಅದಕ್ಕೆ ಪುಡಿ ಮಾಡಿದ ಕಡ್ಲೆಬೀಜ, ಉಪ್ಪು ಮತ್ತು ಸಕ್ಕರೆ ಹಾಕಿ ಕಲಸಿ.
3. ಇನ್ನೊಂದು ಕಡೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಕತ್ತರಿಸಿಟ್ಟುಕೊಳ್ಳಿ.
4. ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ ತಿರುಗಿಸಿ, ಕತ್ತರಿಸಿದ ಹಸಿಮೆಣಸು, ಕರಿಬೇವು ಮತ್ತು ಅರಿಶಿನ ಪುಡಿ ಹಾಕಿ ಒಗ್ಗರಣೆ ಮಾಡಿ.
5. ಬೇಯಿಸಿದ ಆಲೂಗಡ್ಡೆ ಸೇರಿಸಿ 2-3 ನಿಮಿಶ ಹುರಿಯಿರಿ.
6. ಮೊದಲು ಕಲಸಿಟ್ಟ ಸಬ್ಬಕ್ಕಿಯನ್ನು ಹಾಕಿ ಸರಿಯಾಗಿ ಕಲಸಿ ಎಡತರ (medium) ಉರಿಯಲ್ಲಿ 4-5 ನಿಮಿಶ ಬೇಯಿಸಿ. ಸಬ್ಬಕ್ಕಿ ಮೆತ್ತಗಾಗಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಲಿಂಬೆಹಣ್ಣಿನೊಂದಿಗೆ ಬಡಿಸಿ.

(ಚಿತ್ರ ಸೆಲೆ: ಆಶಾ ರಯ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: