ಮಲೆನಾಡಿನ ಅಡುಗೆ – ಶಾವಿಗೆ

ರೇಶ್ಮಾ ಸುದೀರ್.

shaavige4
ಶಾವಿಗೆಹಿಟ್ಟು —— 1 ಕೆ.ಜಿ (60 ಶಾವಿಗೆ ಆಗುತ್ತದೆ)
ಬೆಣ್ಣೆ ———— 1 ನಿಂಬೆಗಾತ್ರ
ಉಪ್ಪು — ರುಚಿಗೆ ತಕ್ಕಶ್ಟು

ಮಾಡುವ ಬಗೆ:
ಶಾವಿಗೆ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಅಳೆದುಕೊಳ್ಳಿ. ಅದೇ ಪಾತ್ರೆಯಲ್ಲಿ ಹಿಟ್ಟಿನ ಪ್ರಮಾಣದಶ್ಟೆ ನೀರನ್ನು ಒಂದು ದಪ್ಪತಳದ ಪಾತ್ರೆಗೆ ಹಾಕಿ ಒಲೆಯ ಮೇಲೆ ಇಡಿ. ನೀರು ಕುದಿಬರುವಾಗ ಬೆಣ್ಣೆ ಮತ್ತು ಉಪ್ಪನ್ನು ಹಾಕಿ. ಉರಿಯನ್ನು ಸಣ್ಣಗೆ ಮಾಡಿ ಹಿಟ್ಟನ್ನು ನೀರಿಗೆ ನಿದಾನವಾಗಿ ಉದುರಿಸಿ, ಪೂರ‍್ತಿ ಹಿಟ್ಟನ್ನು ಹಾಕಿದ ಮೇಲೆ ಪಾತ್ರೆಗೆ ಒಂದು ಮುಚ್ಚಳ ಮುಚ್ಚಿ ಹಾಗೆ ಬಿಡಿ. 10 ನಿಮಿಶದ ನಂತರ ಮುಚ್ಚಳ ತೆಗೆದಾಗ ನೀರು ಮೇಲೆ ಬಂದಿರುತ್ತದೆ, ಈಗ ಒಂದು ಮರದ ಚಮಚದಲ್ಲಿ ಚೆನ್ನಾಗಿ ಗಂಟಿಲ್ಲದಂತೆ ತಿರುಗಿಸಿ ಒಲೆ ಇಂದ ಇಳಿಸಿ. ಅಗಲವಾದ ತಟ್ಟೆಗೆ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಬೇಕು, ಹಿಟ್ಟು ಮಿದುವಾಗ ಬೇಕು (ಜಾಸ್ತಿ ನೀರು ಹಾಕಿ ಕಲಸಬಾರದು). ಕಲಸಿ ಮಿದುವಾದ ಹಿಟ್ಟನ್ನು ಶಾವಿಗೆ ಒರಳಿಗೆ ಹಾಕಿ ಒತ್ತಿ, ಚಿತ್ರದಲ್ಲಿ ತೋರಿಸಿದ ಆಕಾರಕ್ಕೆ ಬರಬೇಕು. ಒತ್ತಿದ ಶಾವಿಗೆಯನ್ನು ಕಡುಬಿನ ತಪ್ಪಲೆಯಲ್ಲಿ 20 ನಿಮಿಶ ಬೇಯಿಸಬೇಕು. ಇಲ್ಲವಾದರೆ ಇಡ್ಲಿ ತಪ್ಪಲೆಯಲ್ಲಿ ಬೇಯಿಸಿ. ಶಾವಿಗೆ ತಯಾರಾಯಿತು. ಇದನ್ನು ಕೋಳಿ ಅತವಾ ಕುರಿಮಾಂಸದ ಸಾರಿನೊಂದಿಗೆ ತಿನ್ನಬಹುದು. ಸಸ್ಯಾಹಾರಿಗಳು ಕಾಯಿಹಾಲಿನೊಂದಿಗೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: