ದೊಡ್ದಮೆಣಸಿನಕಾಯಿ ಮಸಾಲೆ

ರೇಶ್ಮಾ ಸುದೀರ್.

dodda_menasinakayi

ದೊಡ್ಡಮೆಣಸಿನಕಾಯಿ— 3
ನೀರುಳ್ಳಿ———– 2
ಟೊಮಟೊ——— 1
ಅಚ್ಚಕಾರದಪುಡಿ—– 3 ಟಿ ಚಮಚ
ದನಿಯಪುಡಿ——- 1/2 ಚಮಚ
ಗೋಡಂಬಿ——— 1/2 ಲೋಟ
ಶುಂಟಿ-ಬೆಳ್ಳುಳ್ಳಿ ಪೇಸ್ಟ್— 1 ಟಿ ಚಮಚ
ಎಣ್ಣೆ——— 1 ಟೆಬಲ್ ಚಮಚ
ಬೆಣ್ಣೆ——— 1 ನಿಂಬೆಗಾತ್ರ
ನಿಂಬೆಹಣ್ಣು—– 1/2 ಬಾಗ

ಮಾಡುವ ಬಗೆ:
ಒಂದು ಬಾಣಲೆಯಲ್ಲಿ 2 ಟಿ ಚಮಚ ಎಣ್ಣೆ ಹಾಕಿ, ಅದಕ್ಕೆ ಗೋಡಂಬಿ ಹಾಕಿ ಹುರಿಯಿರಿ ಇದಕ್ಕೆ ಅಚ್ಚಕಾರದಪುಡಿ, ದನಿಯಪುಡಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ ಇಳಿಸಿ. ನೀರು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆಹಾಕಿ, ಎಣ್ಣೆಕಾದ ನಂತರ ಹೆಚ್ಚಿದ ದೊಡ್ದಮೆಣಸಿನಕಾಯಿ, ನೀರುಳ್ಳಿ, ಟೊಮಟೊ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ನೀರು ಹಾಕದೆ ಎಣ್ಣೆಯಲ್ಲೇ ಬೇಯಿಸಿಕೊಳ್ಳಿ. ದಪ್ಪಮೆಣಸು ತುಂಬ ಮೆತ್ತಗೆ ಆಗಬಾರದು ಈಗ ಮಿಕ್ಸಿ ಮಾಡಿಕೊಂಡ ಕಾರವನ್ನು ಹಾಕಿ ಚೆನ್ನಾಗಿ ಕುದಿಸಿ. ನಿಂಬೆಹಣ್ಣು ಹಿಂಡಿ, ಬೆಣ್ಣೆಹಾಕಿ, ಕತ್ತರಿಸಿದ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ರುಚಿಯಾದ ದಪ್ಪಮೆಣಸಿನ ಕಾಯಿ ಮಸಾಲೆ ಸಿದ್ದ. ಅಕ್ಕಿರೊಟ್ಟಿ, ಪೂರಿ ಮತ್ತು ಚಪಾತಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: