ರುಚಿಯಾದ ಕಾಯಿಕಡಬು ಮಾಡುವ ಬಗೆ

ಕಲ್ಪನಾ ಹೆಗಡೆ.

IMG_0237

ಕಾಯಿಕಡಬು ತಿನ್ನಲು ತುಂಬಾ ಚೆನ್ನಾಗಿರುತ್ತೆ. ಮಾಡೋದು ಬಲು ಸುಲಬ. ಮಾಡಿ ನೋಡ್ತಿರಾ? ಇಲ್ಲಿದೆ ಆ ಅಡುಗೆ ಮಾಡುವ ಬಗೆ.

ಬೇಕಾಗುವ ಸಾಮಗ್ರಿಗಳು:

1. 1/2 ಕೆ.ಜಿ ಸೂಜಿರವೆ
2. ಕಾಲು ಚಮಚ ಉಪ್ಪು
4. ಎರಡು ಏಲಕ್ಕಿ ಪುಡಿ
5. 1 ಉಂಡೆ ಬೆಲ್ಲ
6. 1 ತೆಂಗಿನಕಾಯಿ

ಮಾಡುವ ಬಗೆ:
ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ರವೆಯನ್ನು ಹಾಕಿ, ನೆನೆಯುವಶ್ಟು ನೀರನ್ನು ಹಾಕಿ 5 ನಿಮಿಶಗಳ ಕಾಲ ನೆನೆಯಲು ಬಿಡಿ. ಆನಂತರ ನೆನೆದ ರವೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಕೊನೆಯಲ್ಲಿ ಅದಕ್ಕೆ ಉಂಡೆ ಬೆಲ್ಲದತುರಿ, ಕಾಲು ಚಮಚ ಉಪ್ಪು, ಏಲಕ್ಕಿ ಪುಡಿ ಹಾಕಿ ರುಬ್ಬಿಕೊಂಡು ಅದನ್ನು ಬಾಣಲೆಗೆ ಹಾಕಿ, ಒಂದು ಸೌಟಿನಿಂದ ಸಣ್ಣ ಉರಿಯಲ್ಲಿ ಕಲಸಿಕೊಳ್ಳಿ. ಕಲಸಿದ ಹಿಟ್ಟು ಗಟ್ಟಿಯಾದ ನಂತರ ಸ್ವಲ್ಪ ಆರಲು ಬಿಡಿ. ಆಮೇಲೆ ಚಿಕ್ಕಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಎಣ್ಣೆ ಸವರಿ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ.

ಇದಕ್ಕೂ ಮೊದಲು ಕಾಯಿಯನ್ನು ತುರಿದು ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಆನಂತರ ಲಟ್ಟಿಸಿದ ಹಾಳೆಯಲ್ಲಿ ಸಮವಾಗಿ ಕಾಯಿತುರಿಯನ್ನು ತುಂಬಿ ಅದನ್ನು ಎಲ್ಲೂ ಒಡೆಯದಂತೆ ಸುತ್ತಲೂ ಒತ್ತಿ. ಆಮೇಲೆ ತಟ್ಟೆಯಲ್ಲಿ ಇಟ್ಟು ಕುಕ್ಕರಿನಲ್ಲಿ ಅತವಾ ಇಡ್ಲಿ ಮಾಡುವ ಪಾತ್ರೆಯಲ್ಲಿಟ್ಟು ಉಗಿಯಲ್ಲಿ ಬೇಯಿಸಿಕೊಳ್ಳಿ. ಕುಕ್ಕರಿನಲ್ಲಿ ಇಟ್ಟು ಬೇಯಿಸುವುದಾದಲ್ಲಿ ವಿಸಿಲ್ ಬದಲು ಒಂದು ಲೋಟವನ್ನು ಮುಚ್ಚಿಡಿ. ಉರಿಯಲ್ಲಿ 20 ನಿಮಿಶಗಳ ಕಾಲ ಬೇಯಲು ಬಿಡಿ. ಆನಂತರ 5 ನಿಮಿಶ ಬಿಟ್ಟು ತುಪ್ಪ ಹಾಕಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: