ಈ ಬಿಸ್ಕತ್ ಅನ್ನು ಮನೆಯಲ್ಲೇ ಮಾಡಬಹುದು!

ಕಲ್ಪನಾ ಹೆಗಡೆ.

20151110_162151

ಈ ಬಿಸ್ಕತ್ ಅನ್ನು ಮನೆಯಲ್ಲೇ ಮಾಡಬಹುದು, ಒಮ್ಮೆ ಮಾಡಿ ನೋಡಿ ಸವಿಯಿರಿ!

ಬೇಕಾಗುವ ಸಾಮಗ್ರಿಗಳು:

1. 1/ 2 ಕೆ.ಜಿ ಮೈದಾಹಿಟ್ಟು
2. 1/2 ಕೆ.ಜಿ ತುಪ್ಪ ( ನಂದಿನಿ ಅತವಾ ಜಿ.ಆರ್.ಬಿ)
3. ಅರ‍್ದ ಚಮಚ ಉಪ್ಪು
4. ಅರ‍್ದ ಚಮಚ ಹಳದಿ ಪುಡಿ
5. ಅರ‍್ದ ಚಮಚ ಓಂ ಕಾಳು
6. ಅರ‍್ದ ಲೋಟ ನೀರು

ಮಾಡುವ ಬಗೆ:

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ಹಾಕಿ. ಅರ‍್ದ ಕೆ.ಜಿ ತುಪ್ಪದಲ್ಲಿ 150 ಗ್ರಾಂ ತುಪ್ಪವನ್ನು ಮಾತ್ರ ಹಾಕಿ ಅದಕ್ಕೆ ಹಳದಿ ಪುಡಿ, ಓಂ ಕಾಳು ಹಾಗೂ ಅರ‍್ದ ಲೋಟ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆನಂತರ 5 ನಿಮಿಶ ಬಿಟ್ಟು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಅದನ್ನು ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ. ಆನಂತರ ಚುಚ್ಚುಕ(fork)ದಿಂದ ಚುಚ್ಚಿ ರಂದ್ರಗಳನ್ನು ಮಾಡಿ. ಉಳಿದ ತುಪ್ಪವನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕಾದ ಬಳಿಕ ಲಟ್ಟಿಸಿದ ಹಾಳೆಯನ್ನು ಬಿಡಿ. ಚಿಕ್ಕ ಉರಿಯಲ್ಲಿ ಜಾಲಿ ಸೌಟಿನಿಂದ ತಿರುಗಿಸಿ ಕಂದು ಬಣ್ಣ ಬರುವದರೊಳಗೆ ತೆಗೆಯಿರಿ. ಆರಿದ ನಂತರ ತಿನ್ನಲು ಕೊಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: