ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್.

anticipate

ಆಗುವುದೆಂದೋ ನನಸು
ಪ್ರತಿದಿನ ಕಾಣುವ ಕನಸು
ಕನಸೆಂಬ ಅಪರಿಚಿತ ಲೋಕದಲ್ಲಿ
ಹುಟ್ಟು ನನ್ನದೇ, ಸಾವು ನನ್ನದೇ

ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ
ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ
ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ
ರಾಣಿಯು ನಾನೇ, ಬಿಕ್ಶುಕಿಯು ನಾನೇ

ಕಣ್ಮರೆಯಾಗುತ ಕಣ್ಣಮುಂದೇ ಚಲಿಸುತಿದೆ
ಸ್ವರ‍್ಗ ದ ಅಪರಿಚಿತ ಸುಕ
ನರಕದ ಪರಿಚಿತ ದುಕ್ಕ

ನನಸೆಂಬ ಲೋಕದಲ್ಲಿ ಹುಡುಕಾಟ ಮುಂದುವರೆದಿದೆ
ಗುರಿ ಇಲ್ಲದ ಬಾಳಿಗೆ
ಗುರಿ ಮುಟ್ಟುವ ದಾರಿಗೆ

ಆಗುವುದೆಂದೋ ನನಸು
ಪ್ರತಿದಿನ ಕಾಣುವ ಕನಸು!

(ಚಿತ್ರ ಸೆಲೆ: vorpalina.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: