ನಿನ್ನ ನೋಡಿದ ಕ್ಶಣದಿಂದಲೇ..

– ನಾಗರಾಜ್ ಬದ್ರಾ.

ನನ್ನ ಕನಸಿನ ಚೆಲುವೆಯು
ಬಾನಿನಿಂದ ದರೆಗಿಳಿದು ಬಂದಿರುವ ಅನುಬವವೊಂದು ಮೂಡಿದೆ
ನನ್ನನೇ ಮರೆತಿರುವೆ ಆ ಕ್ಶಣದಿಂದಲೇ

ಪ್ರೀತಿಯೆಂಬ ಮಾಯಾ ಕಡಲಲ್ಲಿ
ಈಜು ಬಾರದೇ ದುಮಿಕಿರುವ ಬಾವನೆಯೊಂದು ಚಿಗುರಿದೆ
ನಿನ್ನದೇ ನೆನಪಿನಲ್ಲಿ ಮನವು ತೇಲಾಡುತ್ತಿದೆ

ಕಣ್ಣುಗಳಲ್ಲಿ ನಿನ್ನದೇ ಚಿತ್ರವ
ಸೆರೆಹಿಡೆಯುವ ಆಸೆಯೊಂದು ಅರಳಿದೆ
ನಿನ್ನಲ್ಲೇ ನಾ ಸೆರೆಯಾದೆ

ಬಾಳಿನ ಪ್ರತಿ ಕ್ಶಣವು ನಿನ್ನ ಜೊತೆಯಲ್ಲಿ
ಕಳೆಯುವ ಹೊಸ ಆಸೆಯೊಂದು ಹುಟ್ಟಿದೆ
ಇದನ್ನರಿತ ಮನಸ್ಸು ಆಕಾಶದಲ್ಲಿ ಹಾರಾಡುತ್ತಿದೆ

ಹ್ರುದಯವೆಂಬ ಪುಟ್ಟ ಅರೆಮನೆಯಲ್ಲಿ
ನಿನ್ನನ್ನೇ ರಾಣಿಯನ್ನಾಗಿಸುವ ಆಸೆಯೊಂದು ಮನೆಮಾಡಿದೆ
ನಿನ್ನಲ್ಲೇ ನಾ ಶರಣಾದೆ

ಮೌನವೇ ಆವರಿಸಿದ ತುಟಿಯಲ್ಲಿ
ಇಂದು ಬರೀ ನಿನ್ನದೇ ಮಾತು
ನಿನ್ನಲ್ಲೇ ನಾ ಬೆರೆತುಹೋದೆ

ನನ್ನ ನೆರಳು ಅಳಿಸುವವರೆಗು
ನಿನಗೆ ನೆರಳಾಗಿರುವ ಆಸೆಯೊಂದು ಸೇರಿಕೊಂಡಿದೆ
ನಿನ್ನಲ್ಲೇ ನಾ ಮರೆಯಾದೆ

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: