ಅದು ಆಂತರಿಕ ದ್ವಂದ್ವ

– ಡಾ|| ಮಂಜುನಾತ ಬಾಳೇಹಳ್ಳಿ.

duality
ಬಟ್ಟ ಬಯಲಿದು ಗೆಳತಿ
ದಿಕ್ಕೆಂಬುದಿಲ್ಲ
ಎಲ್ಲಾ ವ್ರುತ್ತಾಕಾರ

ತೆರೆದ ಆಕಾಶ
ನಡುವೆ ನೀ
ನಿಂತಿರುವೆ

ಜಾಡು ಹಿಡಿದು
ನಡೆಯುವುದೇ
ಜೀವನ ನೋಡು

ಮನಸು ಕಲ್ಪಿಸಿದ್ದು
ಹ್ರುದಯ ಸಂವೇದಿಸಿದ್ದು
ಅದೇ ದಿಟ್ಟ ನಡೆ

ಎದೆ ಬಾವವೊಂದೆಡೆ
ಮನಸ್ಸು ಇನ್ನೊಂದೆಡೆ
ದಿಕ್ಕು ತೋಚದೆ ಬಾಳಿನನಡೆ
ಅದು ಆಂತರಿಕ ದ್ವಂದ್ವ

( ಚಿತ್ರ ಸೆಲೆ:  2minds1entitymagazine.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: