ಬೆಕ್ಕು ಮತ್ತು ನೆಗಡಿ – ಮಕ್ಕಳ ಕವಿತೆ

– ಚಂದ್ರಗೌಡ ಕುಲಕರ‍್ಣಿ.

Kitten closed in towel

ಕಾಮಿ ಬೆಕ್ಕಿಗೆ ನೆಗಡಿ ಬಂದು
ಪಜೀತಿಗಿಟ್ಟಿತ್ತು

ಬಿಟ್ಟು ಬಿಡದೆ ಸಿಂಬಳ ಸೋರಿ
ಕಿರಿಕಿರಿಯಾಗಿತ್ತು

ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ
ಸೀನು ಸಿಡಿತಿತ್ತು

ತಿಕ್ಕಿ ತಿಕ್ಕಿ ಮೂಗಿನ ತುದಿಯು
ಕೆಂಪಗಾಗಿತ್ತು

ಪುಟ್ಟಿ ಜೊತೆಯಲಿ ತಂಪು ತಂಪು
ಐಸ್ಕ್ರೀಂ ತಿಂದಿತ್ತು

ಬೇಡವೆಂದರು ಕೇಳದೆ ನೀರಲಿ
ಆಟವಾಡಿತ್ತು

ಅಮ್ಮ ಕೊಟ್ಟ ಬಿಸಿಬಿಸಿ ಶುಂಟಿ
ಕಶಾಯ ಕುಡಿದಿತ್ತು

ಸಿಪ್ಪೆ ಸುಲಿದ ಬಳ್ಳೊಳ್ಳಿ ಸರವ
ಕೊರಳಲಿ ಹಾಕಿತ್ತು

ಡಾಕ್ಟರ ಕೊಟ್ಟ ಗುಳಿಗೆ ಮಾತ್ರೆ
ಒಲ್ಲೊಲ್ಲೆ ಎನುತಿತ್ತು

ಸೂಜಿ ಮದ್ದು ಬೇಡವೆನ್ನುತ
ಹಟವ ಹಿಡಿದಿತ್ತು

ವಾರಪೂರ‍್ತಿ ಬೆಚ್ಚನೆಯ ಕಂಬಳಿ
ಹೊದ್ದು ಮಲಗಿತ್ತು

ಎಂಟನೆ ದಿನಕೆ ಇಲಿಯ ಕಂಡು
ಚಂಗನೆ ನೆಗೆದಿತ್ತು

(ಚಿತ್ರ ಸೆಲೆ:  smartlivingnetwork.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ದ್ಯಾವನೂರು ಮಂಜುನಾಥ್ says:

    ಚನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications OK No thanks