ಮತ್ತೆ ಆಸೆಯೊಂದು ಚಿಗುರಿದೆ

 ನಾಗರಾಜ್ ಬದ್ರಾ.

love1

ಮತ್ತೆ ಆಸೆಯೊಂದು ಚಿಗುರಿದೆ
ಮತ್ತೊಮ್ಮೆ ಮುಂಜಾವಿನ ಆಗಮನವಾಗಿದೆ
ಹ್ರುದಯದಲ್ಲಿ ನೀ ಬರುವ ಸಂಚಲನವಾಗಿದೆ

ಕತ್ತಲೊಂದಿಗೆ ಕೊನೆಯಾದ ದಿನವು
ಹೊಸಬೆಳಕಿನೊಂದಿಗೆ ಶುರುವಾಗಿದೆ

ಕಾರ‍್ಮೋಡವು ಆವರಿಸಿರುವ ಮನದಲ್ಲಿಂದು
ನೀಲಿ ಆಗಸ ಕಾಣುವ ನಂಬಿಕೆಯೊಂದು ಹುಟ್ಟಿದೆ

ನನ್ನ ಎದೆಯ ಹೂದೋಟದ ಕೆಂಪು ಗುಲಾಬಿಯು
ನಿನ್ನ ಜಡೆಯ ಸೇರಲು ಮತ್ತೆ ಅರಳಿದೆ

ಗಂಟೆಗೊಮ್ಮೆ ಬರುತ್ತಿದ್ದ ನಿನ್ನ ಕರೆಯು
ಇಂದು ಮತ್ತೆ ಸದ್ದಿಲ್ಲದೆ ಬರುವುದೆಂದು
ಮನಸ್ಸು ಕಾಯುತ್ತಿದೆ

ಕಣ್ಣೀರಿನ ಮಳೆಯಲ್ಲಿ ನೆನೆದ ಜೀವವು
ಬಿಸಿಲಿನ ಪಲ್ಲಕ್ಕಿಯಲ್ಲಿ ತನ್ನ ರಾಣಿಯು
ಬರುವಳೆಂದು ಕನಸು ಕಾಣುತ್ತಿದೆ

ನೀನಿಲ್ಲದೆ ಮುನಿದು ಗೂಡು ಸೇರಿದ
ಮುಸ್ಸಂಜೆಯ ತಂಪಾದ ಗಾಳಿಯು
ಇಂದು ಮತ್ತೆ ಬೀಸುವ ಮೂನ್ಸೂಚನೆ ನೀಡಿದೆ

ಪ್ರೀತಿಯ ಆ ದಿನಗಳು
ನೀ ಮರಳಿ ತರುವೆ ಎಂದು
ಮತ್ತೆ ಆಸೆಯೊಂದು ಚಿಗುರಿದೆ ಗೆಳತಿ

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: