ಮಾವಿನ ಹಣ್ಣಿನ ಸಾಸಿವೆ ಮಾಡುವ ಬಗೆ

ಕಲ್ಪನಾ ಹೆಗಡೆ.

sasive ph

ಮಾವಿನ ಹಣ್ಣಿನ ಸಾಸಿವೆ ಮಾಡೋದು ಹೇಗೆ? ಇಲ್ಲಿದೆ ಅದನ್ನು ಮಾಡುವ ಬಗೆ!!

ಬೇಕಾಗುವ ಪದಾರ‍್ತಗಳು:
4 ಸಾಸಿವೆ ಮಾವಿನ ಹಣ್ಣು, ಸ್ವಲ್ಪ ಬೆಲ್ಲ, 2 ಹಸಿಮೆಣಸಿನಕಾಯಿ, 1 ಒಣಮೆಣಸಿನಕಾಯಿ, ಸಾಸಿವೆಕಾಳು, ಅರ‍್ದ ಹೋಳು ಕಾಯಿತುರಿ, ಅರ‍್ದ ಚಮಚ ಹಳದಿಪುಡಿ, ಒಂದು ಸೌಟು ಮೊಸರು, ರುಚಿಗೆ ತಕ್ಕಶ್ಟು ಉಪ್ಪು.

ಮಾಡುವ ವಿದಾನ:
ಮೊದಲು ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ನೀರು, ಬೆಲ್ಲ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕಿವುಚಿಕೊಳ್ಳಿ. ಆಮೇಲೆ ಮಿಕ್ಸಿಗೆ ಕಾಯಿತುರಿ, ಹಸಿಮೆಣಸಿನಕಾಯಿ, ಸಾಸಿವೆ ಕಾಳು, ಹಳದಿಪುಡಿ ಹಾಕಿ ರುಬ್ಬಿಕೊಂಡು ಅದನ್ನು ಮೊದಲು ತಯಾರಿಸಿದ ಹಣ್ಣಿನ ರಸಕ್ಕೆ ಹಾಕಿ ಸೌಟಿನಿಂದ ಚೆನ್ನಾಗಿ ಕಲಸಿಕೊಳ್ಳಿ. ಕೊನೆಯಲ್ಲಿ ಮೊಸರು ಹಾಕಿ. ಆನಂತರ ಒಗ್ಗರಣೆ ಬಾಣಲೆಗೆ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನೀವು ತಯಾರಿಸಿದ ಮಾವಿನ ಹಣ್ಣಿನ ಸಾಸಿವೆಯನ್ನು ಅನ್ನದೊಂದಿಗೆ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: