ಗರಿ ಗರಿಯಾಗಿ ಕರಿದ ಮೀನು

– ನಮ್ರತ ಗೌಡ.

20160625_201217

ಬೇಕಾಗುವ ಸಾಮಾನುಗಳು:

ಮೀನು – 5 ತುಂಡುಗಳು (ಬಂಗಡೆ, ಅಂಜಲ್ ಇತ್ಯಾದಿ)
ಕಾರದ ಪುಡಿ – 3 ಚಮಚ
ಅರಶಿನ ಪುಡಿ – ಸ್ವಲ್ಪ
ನಿಂಬೆ ಹಣ್ಣು – 2
ಚಿರೋಟಿ ರವೆ – ಸ್ವಲ್ಪ
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ಬೇಕಾಗುವಶ್ಟು

ಮಾಡುವ ಬಗೆ:

ಕಾರದ ಪುಡಿ, ಅರಶಿನ ಪುಡಿ, ನಿಂಬೆರಸ ಮತ್ತು ಉಪ್ಪು ಹಾಕಿ ಕಲಸಿಕೊಳ್ಳಿ. ಕಲಸಿದ ಮಿಶ್ರಣವನ್ನು ರುಚಿ ನೋಡಿ (ಉಪ್ಪು, ಹುಳಿ, ಕಾರ ಸರಿಯಾಗಿದೆಯೇ ಎಂದು ನೋಡಿ). ಮೀನನ್ನು ತೊಳೆದುಕೊಂಡು, ಅದರ ಮೇಲೆ ಗೀರುಗಳನ್ನು ಹಾಕಿಕೊಳ್ಳಿ (ಇದರಿಂದ ಕಾರ ಸರಿಯಾಗಿ ಒಳಸೇರುತ್ತದೆ) ಕಲಸಿದ ಮಿಶ್ರಣವನ್ನು ಮೀನಿನ ಎರಡೂ ಬದಿಗಳಿಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಕಾವಲಿಯಲ್ಲಿ ಸ್ವಲ್ಪ ಎಣ್ಣೆಯನ್ನು ಕಾಯಿಸಿ ನೆನೆಸಿಟ್ಟ ಮೀನನ್ನು ಚಿರೋಟಿ ರವೆಯಲ್ಲಿ ಹೊರಳಾಡಿಸಿ ಕಾವಲಿಯ ಮೇಲೆ ಬೇಯಿಸಿರಿ. ಒಂದು ಕಡೆ ಬೆಂದ ನಂತರ ತಿರುಗಿಸಿ ಮತ್ತೊಂದು ಬದಿಯಲ್ಲಿಯೂ ಬೇಯಿಸಿರಿ. ಗರಿಯಾದ ಮೀನು ತಿನ್ನಲು ರೆಡಿ.
ಗಮನಿಸಿ: ಕಲಸಿಕೊಳ್ಳುವಾಗ ನಿಂಬೆ ರಸದಲ್ಲೇ ಕಲಸಿಕೊಳ್ಳಲು ಪ್ರಯತ್ನಿಸಿ, ಬೇಕಿದ್ದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಳ್ಳಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: