18 ಸಾಲುಗಳಲ್ಲಿ, ನನ್ನ ಅರಿವಿನ ಮಿತಿಯಲ್ಲಿ

 ಶ್ರೀನಿವಾಸಮೂರ‍್ತಿ ಬಿ.ಜಿ.

Knowledge

ಆಸೆ ಹುಟ್ಟಿತು ಮನವ ಹಿಡಿಯಿತು
ಬಾಸು ನಾನೇ ಎಂದು ಕುಣಿಯಿತು
ವಸ್ತು ಗಿರಾಕಿ ಎರಡು ನಾನೇ ಎಂದು ಬಾಳುಗೆಡೆದು
ಹಸ್ತ ನುಂಗಿತು ಬದುಕ ಅಳಿಸಿತು
ಮಸ್ತು ಜಾಲವ ಹೆಣೆದು ದಬ್ಬಿತು
ಸುಸ್ತು ಮಾನವ ಆಸೆ ಜಾಲವ ಸೇರಿ ಬಾಲನಾದ

ಇಶ್ಟ ಪಟ್ಟರೆ ಕಶ್ಟ ಕೊಡುವರು
ಕಶ್ಟ ಕಳೆದರೆ ದ್ರುಶ್ಟಿ ನೆಡುವರು
ಮುಶ್ಟಿ ಹಿಡಿದರೆ ದುಶ್ಟ ಎಂಬರು ಬೇದಿ ಮಾನಸಿಕರು
ನಿಶ್ಟೆ ಮನದಲಿ ನಶ್ಟ ಸುಳಿದರೆ
ಪುಶ್ಟಿ ದೊರಕದು ಕಶ್ಟ ಕಳೆಯಲು
ತುಶ್ಟಿ ಬಾಳಿಗೆ ನಿಶ್ಟೆ ಬೆಸೆಯಿರಿ ನೊಂದ ಮಾನಸಿಕರೆ

ಅರಕೆ ಎಂಬುದು ಅಂತ್ಯ ಮುಟ್ಟದ
ಅಮರ ಸತ್ಯದ ದಾರಿ ಸೇರದ
ಕರಡು ಎಲ್ಲೆಯ ಒಳಗೆ ಸಿಲುಕದ ಯತ್ನ ನಮೂನೆಯದು
ಅರಿತು ನೋಡಿದರೆ ಬೇರೆ ಕಾಣುವ
ಕುರಿತು ಬರೆದರೆ ತಿರುವು ನಿಲುವಿಗೆ
ಬೆರಗ ತಿಳಿಯಲು, ಲೋಕ ಬುದ್ದಿಗೆ ಬೇಕು ಈ ನಮೂನೆ

( ಚಿತ್ರ ಸೆಲೆ: OKGW )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: