ಮಜ್ಜಿಗೆ ಹುಳಿ ಮಾಡುವ ಬಗೆ

ಕಲ್ಪನಾ ಹೆಗಡೆ.

ph

ಬೇಕಾಗುವ ಪದಾರ‍್ತಗಳು:

ಅರ‍್ದ ಕೆ.ಜಿ ಬೂದು ಕುಂಬಳಕಾಯಿ, 2 ಹಸಿಮೆಣಸಿನಕಾಯಿ, 4 ಚಮಚ ಕಡ್ಲೆಬೇಳೆ, 1 ಚಮಜ ಜೀರಿಗೆ, ಇಂಗು, ಅರಿಶಿನ ಪುಡಿ, 2 ಸೌಟು ಮಜ್ಜಿಗೆ, 1 ಒಣಮೆಣಸಿನಕಾಯಿ, ತೆಂಗಿನಕಾಯಿ ತುರಿ, ರುಚಿಗೆ ತಕ್ಕಶ್ಟು ಉಪ್ಪು.

ಮಾಡುವ ಬಗೆ:

ಮೊದಲು ಕಡ್ಲೆಬೇಳೆಯನ್ನು ಅರ‍್ದ ಗಂಟೆಗಳ ಕಾಲ ನೆನಸಿಡಿ. ಕುಂಬಳಕಾಯಿಯ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ಒಂದು ಪಾತ್ರೆಯಲ್ಲಿ ಬೇಯುವಶ್ಟು ನೀರು, 1 ಚಮಚ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಆಮೇಲೆ ಮಿಕ್ಸಿಗೆ ನೆಂದ ಕಡ್ಲೆಬೇಳೆ, ಕಾಯಿತುರಿ, ಜೀರಿಗೆ, ಹಸಿಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಕಲಕವನ್ನು ತೆಗೆದು ನೀವು ಬೇಯಿಸಿಕೊಂಡ ಹೋಳುಗಳಿಗೆ ಹಾಕಿ ಅದಕ್ಕೆ ತಕ್ಕ ನೀರು, ಉಪ್ಪು, ಕರೀಬೇವು ಹಾಕಿ ಕುದಿಸಿಕೊಳ್ಳಿ. ಸ್ವಲ್ಪ ಕುದಿದ ನಂತರ ಮಜ್ಜಿಗೆ ಹಾಕಿ ಅರ‍್ದ ನಿಮಿಶ ಕುದಿಸಿಕೊಳ್ಳಿ. ಆನಂತರ ಬಾಣಲೆಗೆ ಎಣ್ಣೆ, ಜೀರಿಗೆ, 2 ಕಾಳು ಮೆಂತ್ಯ, ಒಣಮೆಣಸಿನಕಾಯಿ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನೀವು ತಯಾರಿಸಿದ ಮಜ್ಜಿಗೆ ಹುಳಿಯನ್ನು ಅನ್ನದೊಂದಿಗೆ ಅತವಾ ನುಚ್ಚಿನ ಉಂಡೆ ಜೊತೆಗೆ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: