ಕೊನೆವರೆಗೂ ಕಾಯುವೆ..

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ).

 

ಕೋಪಿಸುವ ಓ ಪ್ರೀತಿಯೇ, ನಾ ನಿನ್ನ ಸ್ನೇಹಿತೆಯೇ
ಪ್ರೀತಿಸುವ ಮುನ್ನವೇ, ಕನಸಿನ ಆಸೆಯೇ

ಕಾಡುತ್ತಿರುವ ಪ್ರೀತಿಯೇ, ನಾ ನಿನ್ನ ಸರಿಸಲಾರೆಯೇ
ನೋಯಿಸುವ ಮುನ್ನವೇ, ಸಹಿಸಲಾರೇನೇ ಈ ಏಕಾಂತವೇ

ಚಲಿಸುವ ಮೋಡವೇ, ನೀ ಸೋತರೆ ಹೇಗೆಯೇ
ನಮ್ಮಿಬ್ಬರ ಮಿಲನವೇ, ಬುವಿಗೆ ಆಸರೆಯೇ

ಚಿಗುರಿದ ಎಲೆಯೇ, ನೀ ಬಾಡಿದರೆ ಹೇಗೆಯೇ
ಮರಳಿ ಬರುವೆಯೇ ಹೇಳೆಯೇ, ನೀ ನನ್ನ ಬಾವನೆಯೇ

ಬಣ್ಣದ ಚಿಟ್ಟೆಯೇ, ಹಾರುತ್ತಿರುವೆ ನೀ ಎಲ್ಲಿಯೇ
ಬೇರೆಯ ಹೂವಿನ ಆಸೆಯೇ, ನೀ ಬಾರೆಯೇ ಇಲ್ಲಿಯೇ

ಹ್ರುದಯ ಬಡಿತ ನೀನೆಯೇ, ನೀ ನಿಂತರೆ ನಾ ಎಲ್ಲಿಯೇ
ಮಿಡಿತ ನೀನೇ ಜೀವವೇ, ಕೊನೆವರೆಗೂ ಕಾಯುವೆ

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks