ತಂದೆ, ಮಕ್ಕಳು ಮತ್ತು ಮನೆ – ಪುಟ್ಟ ಬರಹ

– ಕೆ.ವಿ.ಶಶಿದರ.

mane

ನಿವ್ರುತ್ತಿಯಾಗಿ ಹತ್ತಾರು ವರ‍್ಶವಾಯ್ತು. ವಯಸ್ಸು ಎಪ್ಪತ್ತಾಯಿತು. ಕೈ ಕಾಲುಗಳಲ್ಲಿ ನಿಶ್ಯಕ್ತಿ. ಜೊತೆಗೆ ನಿತ್ರಾಣ. ಇದಕ್ಕೆ ಪೂರಕವಾದಂತೆ ಆಲ್‍ಜೈಮರ‍್ಸ್(Alzheimer’s) ಕಾಯಿಲೆ. ಹೈರಾಣಾಗಿದ್ದರು. ಕಣ್ಣು ಹಾಗೂ ಕಿವಿ ಮಂದವಾಯಿತು. ತಾವು ಏನಾಗಬಾರದು ಅಂತ ಇಶ್ಟು ದಿನ ಬಯಸಿದ್ದರೊ ಅದೆಲ್ಲಾ ಆಗಿ ಹೋಗಿತ್ತು. ಎಲ್ಲಾ ಕಾಯಿಲೆಗಳೂ ಅಂಟಿಕೊಂಡಿದ್ದವು. ಜಗನ್ನಿಯಾಮಕನ ಆಟ ಕಂಡವರಾರು. ಮಕ್ಕಳಿಗೆ ಬಾರ. ಹಿಂಸೆಯಾಗುತ್ತಿತ್ತು. ದಿನಗಳನ್ನು ಎಣಿಸುತ್ತಿದ್ದರು.

ಹತ್ತಾರು ವರ‍್ಶಗಳಿಂದ ತಂದೆಯ ಆರೈಕೆ ಮಾಡಿ ರೋಸಿಹೋಗಿದ್ದರು ಮಕ್ಕಳು. ತಮ್ಮೆಲ್ಲಾ ಆಸೆ ಆಕಾಂಕ್ಶೆಗಳನ್ನು ಬದಿಗೊತ್ತಿ ಟೊಂಕ ಕಟ್ಟಿ ನಿಂತಿದ್ದರು. ವರ‍್ಶಗಳಾದರೂ ಕಿಂಚಿತ್ತು ಪ್ರಯೋಜನ ಕಾಣಲಿಲ್ಲ. ಇದರಿಂದ ಹೊರಬರಲು ಅವರಿಗೆ ಕಂಡಿದ್ದು ಒಂದೇ ಮಾರ‍್ಗ. ಬೇರೆ ದಾರಿ ಕಾಣದೆ ಬಾರವಾದ ಹ್ರುದಯದಿಂದ ಒಂದು ದಿನ ಅವರನ್ನು ಮನೆಯಿಂದ ಹೊರಹಾಕಿದರು.

ಅದೇ ಮನೆ, ದಶಕಗಳ ಹಿಂದೆ ಯಾವ ಮಕ್ಕಳ ವಿದ್ಯೆಗಾಗಿ ಅಡಮಾನ ಮಾಡಿ, ಬಂದ ಹಣದಲ್ಲಿ ಮಕ್ಕಳಿಗೆ ವಿದ್ಯೆ ಕೊಡಿಸಿ ಮತ್ತೆ ಮನೆಯನ್ನು ಹಿಂದಕ್ಕೆ ಪಡೆಯಲು ಹರ ಸಾಹಸ ಮಾಡಿ ಶತಾಯ ಗತಾಯ ಉಳಿಸಿಕೊಂಡಿದ್ದರೋ, ಅದೇ ಮನೆಯಿಂದ.

( ಚಿತ್ರ ಸೆಲೆ: mcnygenealogy.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: