ಗುರುವಿಗೆ ನಮನ

– ಡಾ|| ಮಂಜುನಾತ ಬಾಳೇಹಳ್ಳಿ.

namaskara

ಗುರು ಎಂಬ ದರ‍್ಪಣದಿ
ದ್ರುಶ್ಟಿಸಿ ಕೊಳಬೇಕು
ನಮ್ಮ ರೂಪವನು
ನಾವೇನೆಂಬುದನು

ನಾವೆಂಬ ಮೇಣದ ಬತ್ತಿ
ಉರಿಸಲು ಬೇಕು
ರೀತಿಯ ನೀತಿಯ
ಕಿಡಿಯೊಂದು

ಗುರು ಎಂಬುದು
ಅನಂತತೆ
ಹಲವು ದೀಪಗಳ
ಬೆಳಗುವ ಸಶಕ್ತಿ

ಗುರು ಎಂಬುದು
“ಗುರುತ್ವ”
ಸೆಳೆದುಕೊಳ್ಳಬೇಕು
ನಮ್ಮ ಒಳಗೊಳಗೆ

ಗುರು ಹಿಂದೆ
ಗುರಿ ಮುಂದೆ
ಗುರುವೆಂಬ ದೀವಿಗೆಗೆ
ನನ್ನದೋ ಅನಂತ ನಮನ

(ಚಿತ್ರ ಸೆಲೆ: wikihow )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: