ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.

lonely-man-136400664789603901-150923153428

ಮಲ್ಲಿಗೆಯ ಮನಸವಳದು
ತಂಪೆಲರ ಚಿಟಪಟ
ಕಲರವ ಕೂಗು ಅವಳದು
ಪ್ರೀತಿ ಕಾಳಜಿಯಿಂದ
ಮನ ಗೆದ್ದವಳು
ಯಾರಿವಳು ಯಾರಿವಳು
ಮುತ್ತಿನ ಮಳೆಯಲ್ಲಿ ಮರೆಯಾದವಳು

ಸ್ನೇಹದಿಂದ ಹೆಣೆದ
ಪ್ರೀತಿ ಕಾಳಜಿಯ ಬಲೆಯಲ್ಲಿ
ಬೀಳಿಸಿರುವಳು,
ಮದುರ ಬಾವಗಳ
ಮತ್ತಿನ ಮುತ್ತನು ಪೋಣಿಸಿರುವಳು

ಸದಾ ನನಗಾಗಿ
ಮಿಡಿಯುವ ಆ ನಿನ್ನ ಮನವು,
ಕೇಳುತಿದ್ದರೆ ನಿನ್ನ
ಆ ಪಿಸುಮಾತುಗಳು,  ಸವಿರುಚಿ ಪನ್ನೀರು
ಸಂತಸದ ಅಲೆಗಳಲ್ಲಿ
ಮರೆಯಾಗಿದೆ ನೋವಿನ ಕಣ್ಣೀರು

ನೋಡು ನೋಡುತಲೇ
ಸವಿ ಜೇನಿನ ಗೂಡು ಕಟ್ಟಿದಳು
ಯಾರಿವಳು ಯಾರಿವಳು
ಪ್ರೇಮ ಅಮ್ರುತ ಕುಡಿಸಿರುವವಳು

ಈ ಜೀವ ನಿನಗೆ
ಚಿರರುಣಿ ಎಂದೆಯೆಂದಿಗೂ
ಯಾರಿವಳು ಯಾರಿವಳು
ಕಣ್ಣಂಚಲಿ ಮರೆಯಾದವಳು

(ಚಿತ್ರಸೆಲೆ: home.bt.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: