ಚುಟುಕು ಕವಿತೆಗಳು

– ಸದಾನಂದ.ಬ.ಸಕ್ಕರಶೆಟ್ಟಿ.

love-1

1. ಬಂದಿರುವೆ ಬಡಿಸಾಕ ಬೆಳದಿಂಗಳ
ಹಿಡಿ ಹುಡುಗಿ ನಿನ್ನ ಉಡಿ ಮುಂದ
ತಂದಿರುವೆ ಕೆರೆದಂಡಿಯ ಕಮಲವ
ಮುಡಿಸುವೆ ನಿನ್ನ ಮುಡಿ ತುಂಬ

ಚೆಲ್ಲಿರುವೆ ಮುತ್ತುಗಳ ಮಳೆಹನಿಯ
ಹಿಡಿತುಂಬ ಮುಚ್ಚಿಡು ಒಡಲಾಳ
ಬರೆದಿಡು ನನ್ನ ಈ ಕವನವ
ನೆನಪಾದಾಗ ಹರಿಸು ಗಮನವ

2. ಮನಸಿನ ಮೂಲೆಯಲಿ ಕದನವಾಗಿದೆ
ಮಹಾಯುದ್ದಕ್ಕಿಂತ ಹೆಚ್ಚು ನೋವು ತಂದಿದೆ
ಈ ಸಮರದಲಿ ಸೈನಿಕರಿಲ್ಲ
ಬರೀ ಬಾವನೆಗಳೇ ಶಸ್ತ್ರಾಸ್ತ್ರಗಳು ಎಲ್ಲ

3. ನೆರೆಯ ತೊರೆಯ ಮೇಲೆ ಬರೆದ ಕವನ
ಕೇವಲ ಮುಗಿಲು ಓದಬಹುದು
ಕಣ್ಣೀರಿನ ಲೇಕನಿ ಬತ್ತಿದ ಮೇಲೆ
ನೆರೆ ಹೊರೆಯವರ ರುಣ ಪಡೆಯಬೇಕು

4. ಪ್ರೇಮ ಕವಲಿಗೆ ಕಾಮಗಾರಿ ನಂದೇನೆ
ಪ್ರೀತಿ ಪ್ರೇರಣೆಗೆ ಆದಿ-ಅನಂತ ನೀನೇನೆ
ಉಕ್ಕಿ ಬರುತಿರಲು ಬಾವನೆ ಕವಲಿನಲಿ
ದಣಿಯದಿರು ಆಣೆಕಟ್ಟೆ ಕಟ್ಟಿ ಸುಮ್ಮನೆ

5. ಉಸಿರ ಕಟ್ಟಿನೋಡು ನೆನಪಿಗೆ ಬರುವೆ
ಹಸಿರ ನೆಟ್ಟುನೋಡು ಕನಸಲೂ ಬರುವೆ
ಕಾದು ಕಂಗಾಲಾಗಿರುವ ದರೆಗೆ ಮೈಯತುಂಬಿ
ಬೆಳೆದು ಮಳೆಯ ಸುರಿಸುವೆ

( ಚಿತ್ರ ಸೆಲೆ: whatsappstatus1.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: