ಮಲೆನಾಡು ಶೈಲಿ ಸೀಗಡಿ ಹುರಕಲು

– ನಮ್ರತ ಗೌಡ.

20160722_213921

ಬೇಕಾಗುವ ವಸ್ತುಗಳು:

ಶುಚಿಮಾಡಿದ ಸೀಗಡಿ – 1/2 ಕೆ.ಜಿ.
ನಿಂಬೆ ಹುಳಿ – 2
ಬೆಳ್ಳುಳ್ಳಿ – ದೊಡ್ಡ ಗಾತ್ರದ್ದು 2
ಕಾರದ ಪುಡಿ – 4 ಚಮಚ
ದನಿಯ ಪುಡಿ – 1 ಚಮಚ
ಎಣ್ಣೆ – ಸ್ವಲ್ಪ

ಮಾಡುವ ಬಗೆ:

ಮೊದಲಿಗೆ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಅದಕ್ಕೆ ಬೆಳ್ಳುಳ್ಳಿಯನ್ನು ಬಿಡಿಸಿ ಜಜ್ಜಿಕೊಂಡು ಹಾಕಿರಿ. ಅದನ್ನು ಸ್ವಲ್ಪ ಹುರಿದುಕೊಂಡು ಅದಕ್ಕೆ ಸೀಗಡಿ, ಉಪ್ಪು ಮತ್ತು ಸ್ವಲ್ಪ ಅರಸಿನ ಪುಡಿ ಹಾಕಿ ಹುರಿಯಿರಿ. ಸೀಗಡಿ ಸ್ವಲ್ಪ ಬೆಂದ ನಂತರ ಅದಕ್ಕೆ ನಿಂಬೆ ರಸ ಬೆರೆಸಿರಿ. ಐದು ನಿಮಿಶಗಳ ನಂತರ ಅದಕ್ಕೆ ಕಾರದ ಪುಡಿ, ದನಿಯ ಪುಡಿ ಸೇರಿಸಿ ನೀರು ಆರುವವರೆಗೆ ಬೇಯಿಸಿ ಇಳಿಸಿರಿ. ರುಚಿಯಾದ ಮಲೆನಾಡು ಶೈಲಿ ಸೀಗಡಿ ಸಿದ್ದ. ಇದು ಅನ್ನದೊಂದಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: