ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.

 

1. ಎದ್ಯಾಗಿನ ಮಾತು ಬಯಲಾಗ ಬಂದು
ಹಸಿಯಾತ ಅಂಗಳ
ಕಿವಿಮ್ಯಾಲೆ ಹಾಕೊಳಲಿಲ್ಲ
ನೀ ನನ್ನ ಮಾತು ಹೇಳಿ ಆತು ತಿಂಗಳ
ಇನ್ನ ತಡಮಾಡಿದ್ರ ನೀ ಹಿಂಗ
ಆಗತೈತಿ ನನ್ನ ಹ್ರುದಯ ತಂಗಳ

2. ನಗುವಿಗೆ ನಡಕ ಬಂದಿತ್ತ
ಬಯಕೆಯ ಬತ್ತಿ ಹೊತ್ತುರಿದಿತ್ತ
ನೀ ಹಸಿರಾಗಿ ಎದರ ನಿಂತಾಗ
ನಾ ಹೆಸರಿಟ್ಟ ನಿನ್ನ ಕರ‍್ದಾಗ

3. ಇಬ್ಬರಿಗು ಬಿದ್ದದ್ದು ಒಂದೇ ಕನಸು
ನನಗೆ ಮೊದಲಿಂದಾ, ನಿನಗೆ ಕೊನೆಯಿಂದಾ
ಹೀಗಿರುವಾಗ ಕನಸಿಗೆ ಮದ್ಯಂತರ ಬೇಕೇ?
ಜೊತೆಯಾಗೊ ಸಮಯದಲ್ಲಿ ವಿಶ್ರಾಂತಿಯೇಕೆ?

( ಚಿತ್ರ ಸೆಲೆ: whatsappstatus1.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: