ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್.

kamala

ಏನಾಗಿದೆ ನನಗೇನಾಗಿದೆ
ಮನಸೀಗ ಏಕೋ ಮರೆಯಾಗಿದೆ
ಹಸಿರಾಗಿದೆ ಉಸಿರಾಗಿದೆ
ನಿನ್ನ ಹೆಸರೀಗ ನನ್ನ ಉಸಿರಾಗಿದೆ

ಕರಗಿದೆ ಮನ ಕರಗಿದೆ
ಇಬ್ಬನಿಯಂತೆ ಈ ಮನ ಕರಗಿದೆ
ಮುಳ್ಳಿನ ನಡುವಲಿ ಆ ಸುಮದಂತೆ
ಅರಳಿದ ಹೂಮನವ ನಾ ನೋಡಿದೆ

ಹಾರಾಡಿದೆ ಮನ ಹಾರಾಡಿದೆ
ಕನಸುಗಳೆಲ್ಲ ಕೈಸೇರಿದೆ
ಮೋಡದ ಮರೆಯ ಕಿರಣಗಳಂತೆ
ಮನದ ಆಳಕೆ ನೀ ಇಳಿದೆ

ಹಾಡಿದೆ ಕೋಗಿಲೆ ಹಾಡಿದೆ
ಜೋಡಿಯ ನೋಡಿ ಈಗ ಹೊಗಳಿದೆ
ಕೆರೆಯ ಕಮಲಕೆ ನಾಚಿಕೆಯು ಹೆಚ್ಚಿ
ನಗುತ ಕೆನ್ನೆಯು ಕೆಂಪಾಗಿದೆ

ಕುಣಿದಿದೆ ಮನ ಕುಣಿದಿದೆ
ನವಿಲಿನ ಜೊತೆಗೆ ನಲಿದಿದೆ
ಮಂದಾರಹೂವು ಮಂಟಪದಲ್ಲಿ
ಮದುವೆ ಸಂಬ್ರಮವು ಹೆಚ್ಚಾಗಿದೆ

(ಚಿತ್ರಸೆಲೆ: make2fun.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: