ನಮ್ಮ ನಾಡು ಕರುನಾಡು

– ಸುರಬಿ ಲತಾ.

karunadatayi1

ಹಳ್ಳಿ ಹಳ್ಳಿ ಸೇರಿ ಊರಾಯಿತು
ಊರು ಊರು ಸೇರಿ ನಾಡಾಯಿತು

ಮಹಾಶಿಲ್ಪಿಗಳಿಂದ ಸುಂದರ ಕಲೆ
ಸಂಸ್ಕ್ರುತಿಯನ್ನು ಬಿಂಬಿಸುವುದು ನಮ್ಮ ನೆಲೆ

ಶ್ರುಂಗಾರಕ್ಕೆ ಬೇಲೂರು, ಹಳೇಬೀಡು
ಇದುವೇ ನಮ್ಮ ಕನ್ನಡ ನಾಡು

ಕೋಗಿಲೆಗೆ ಸಮನಾದ ಕವಿಗಳ
ಗೀತ ಗಾಯನ ಮನ ತಣಿಸುತಿರಲು

ಸಜ್ಜಾಗಿದೆ ಹೊಸ ಇತಿಹಾಸ ಬರೆಯಲು
ನಮ್ಮ ನಾಡ ಸೊಬಗನ್ನು ಬಣ್ಣಿಸಲು

ಜೀವತೆತ್ತರು ನಾಡು ನುಡಿಗೆ ಹಲವರು
ಬಿಟ್ಟುಕೊಡದೇ ತಮ್ಮತನವ ಸಾರಿದರು

ಕನ್ನಡವನ್ನು ಉಳಿಸಲು ಎಂದೂ ಮುಂದೆ ಸಾಗುವ
ಸ್ನೇಹದಿಂದಲೇ ಕನ್ನಡವನ್ನು ಉಳಿಸಿ ಬೆಳೆಸುವ

( ಚಿತ್ರ ಸೆಲೆ: skyscrapercity.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: