‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

ವಿಜಯಮಹಾಂತೇಶ ಮುಜಗೊಂಡ.

colosseum_in_rome_italy

ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ.

  • ಜಗತ್ತಿನಲ್ಲಿಯೇ ಅತಿಹೆಚ್ಚು ಸುತ್ತಾಡುಗರನ್ನು ಸೆಳೆಯುವ ನಾಡು ಇಟಲಿ. ಇಟಲಿಯ 50 ತಾಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಿದೆ. ಬೇರೆ ಯಾವ ನಾಡಿನಲ್ಲೂ ಇಶ್ಟೊಂದು ಪಾರಂಪರಿಕ ತಾಣಗಳು ಗುರುತಿಸಲ್ಪಟ್ಟಿಲ್ಲ.
  • ಜಗತ್ತಿನಲ್ಲಿಯೇ ಅತಿಹೆಚ್ಚು ವೈನ್ ತಯಾರಿಸುವ ನಾಡು ಇಟಲಿ. ಜಗತ್ತಿನ ಸುಮಾರು 19% ವೈನ್‍ಅನ್ನು ಇಟಲಿ ತಯಾರಿಸುತ್ತದೆ.
  • ಇಡೀ ಯುರೋಪ್‍ನಲ್ಲಿಯೇ ಅತಿಹೆಚ್ಚು ಉರಿಬೆಟ್ಟಗಳು(volcano) ಇರುವುದು ಇಟಲಿಯಲ್ಲಿ. ತೆಂಕಣ ಇಟಲಿಯಲ್ಲಿರುವ ಮೌಂಟ್ ಎಟ್ನಾ ಎನ್ನುವ ಉರಿಬೆಟ್ಟ 3,500 ವರ್‍ಶಗಳಿಂದ ಬೆಂಕಿಯುಗುಳುತ್ತಿದೆ.
  • ಅತಿಹೆಚ್ಚು ನೆಲನಡುಕಗಳು(earthquake) ಆಗುವುದೂ ಇಟಲಿಯಲ್ಲಿಯೇ. ತೆಂಕಣ ಇಟಲಿಯ ಸಿಸಿಲಿಯಲ್ಲಿ 1693ರಲ್ಲಿ ಆದ ಒಂದು ನೆಲನಡುಕದಿಂದ ಸುಮಾರು 60,000 ಮಂದಿ ಸತ್ತರು
  • ಇಟಲಿಯ ಅತ್ಯಂತ ಹಳೆಯ ಟ್ರೇವಿ ನೀರ್‍ಬುಗ್ಗೆಯಲ್ಲಿ ಸುತ್ತಾಡುಗರು ದಿನವೊಂದಕ್ಕೆ ಸುಮಾರು 3000 ಯೂರೋ ಚಿಲ್ಲರೆ ಎಸೆಯುತ್ತಾರೆ.
  • ಇಟಲಿಯ ಮಿಲನ್ ನಗರದಲ್ಲಿ ಒಂದು ವಿಚಿತ್ರ ಕಾನೂನು ಇದೆ. ಯಾವಾಗಲೂ ಮುಕದ ಮೇಲೆ ನಗು ಹೊಂದಿರಬೇಕು ಎನ್ನುತ್ತದೆ ಆ ಕಾನೂನು! ಸಾವು ಮತ್ತು ಆಸ್ಪತ್ರೆ – ಈ ಕಾನೂನಿಗೆ ಹೊರಪಡಿಕೆಗಳು.
  • ರಸ್ತೆಯ ಬದಿಯಲ್ಲಿ ಕ್ರೇಯಾನ್‍ ಬಳಸಿ ಬರೆಯುವುದು ಮತ್ತು ಬಿಕ್ಶೆ ಬೇಡುವುದು ಇಟಲಿಯ ಕಾನೂನಿಗೆ ವಿರುದ್ದ. ಇದಕ್ಕೆ ಶಿಕ್ಶೆ ತಪ್ಪಿದ್ದಲ್ಲ.
  • ಪೆಲ್ಶಿಯಾನೋ ಡೆಲ್ ಮೆಸ್ಸಿಕೋ(Falciano del Massico) ನಗರದಲ್ಲಿ ಸಾಯುವುದು ಅಲ್ಲಿನ ಕಾನೂನಿಗೆ ವಿರುದ್ದವಾದುದು. ಕಾರಣ – ಸುಡುಗಾಡಿನಲ್ಲಿ ಜಾಗ ಇಲ್ಲದಿರುವುದು!
  • ಇಟಲಿ ಜಗತ್ತಿನ ಎರಡು ಅತಿ ಸಣ್ಣ ದೇಶಗಳನ್ನು ಸುತ್ತುವರಿದಿದೆ. ಸ್ಯಾನ್ ಮ್ಯಾರಿನೋ ಮತ್ತು ವ್ಯಾಟಿಕನ್ ಸಿಟಿ – ಇವೇ ಆ ಎರಡು ದೇಶಗಳು.
  • ಇಟಲಿಯಲ್ಲಿ ಮಿಂಬಲೆಯ ಬಳಕೆ ತುಂಬಾನೇ ಕಡಿಮೆ. ಅಲ್ಲಿನ ಮಂದಿಯೆಣಿಕೆಯ ಮೂರನೆಯ ಒಂದು ಬಾಗ ಮಿಂಬಲೆಯನ್ನು ಬಳಸಿಯೇ ಇಲ್ಲ.
  • 1932ರಲ್ಲಿ ಶುರುವಾದ ವೆನಿಸ್ ಸಿನೆಮಾ ಹಬ್ಬ(Venice Film Festival) ಜಗತ್ತಿನಲ್ಲಿಯೇ ಮೊದಲ ಸಿನೆಮಾ ಹಬ್ಬ.
  • ಲೋಸ್ಚ್‌ಬರ್‍ಗ್(Lötschberg) ಕೊಳವೆದಾರಿ ಜಗತ್ತಿನಲ್ಲಿಯೇ ಅತಿ ಉದ್ದದ ಕೊಳವೆ ದಾರಿ. 22 ಮೈಲಿ ಉದ್ದದ ಈ ದಾರಿ ಸ್ವಿಟ್ಜರ್‍ಲೆಂಡ್ ಮತ್ತು ಇಟಲಿ ನಡುವಿನ ಕೊಂಡಿಯಾಗಿದೆ.
  • ಸುಮಾರು 61 ಮಿಲಿಯನ್ ಮಂದಿಯೆಣಿಕೆ ಇರುವ ಇಟಲಿ ಜಗತ್ತಿನಲ್ಲಿಯೇ ಐದನೇ ಹೆಚ್ಚು ಮಂದಿಯೆಣಿಕೆಯುಳ್ಳ ದೇಶ. ಆದರೆ ಅತಿ ಕಡಿಮೆ ಹುಟ್ಟು ಮತ್ತು ಹೆರುವೆಣಿಕೆ ಇರುವ ದೇಶಗಳಲ್ಲಿ ಇಟಲಿಯೂ ಒಂದು.
  • ಇಟಲಿಯಲ್ಲಿರುವ ಕೇಡುತಂಡಗಳು(mafia) ಜಿಡಿಪಿಯ 7% ಪಾಲನ್ನು ಹೊಂದಿವೆ.
  • ಸಾರ್‍ಡಿನಿಯನ್(Sardinian) ನಡುಗಡ್ಡೆಯಲ್ಲಿರುವ ಮಾಟಗಾತಿಯರು ಅಲ್ಲಿನ ನೆಲಸಿಗರ ಮಯ್ಯೊಳಿತಿಗೆ ಕಶಾಯ ಮಾಡಿಕೊಡುತ್ತಾರೆ. ಈ ಮಾಟಗಾತಿಯರು ಗುಟ್ಟಾಗಿ ತಮ್ಮ ಹೆಣ್ಣುಮಕ್ಕಳಿಗೆ ಮಾತ್ರ ಆ ಕಶಾಯವನ್ನು ಮಾಡುವ ಬಗೆಯನ್ನು ಹೇಳಿಕೊಡುತ್ತಾರೆ.
  • ವೆನಿಸ್‍ನ ತೆಂಕಣಕ್ಕೆ ಇರುವ ಪೊವೇಗ್ಲಿಯಾ(Poveglia) ನಡುಗಡ್ಡೆಯಲ್ಲಿ ಬಯಾನಕ ದೆವ್ವಗಳಿವೆ ಎಂದು ನಂಬುತ್ತಾರೆ.  ಅಲ್ಲಿಗೆ ಯಾರನ್ನೂ ಹೋಗಲು ಬಿಡುವುದಿಲ್ಲ.

(ಮಾಹಿತಿ ಸೆಲೆ: factsd.com, italianwinecentral.com roughguides.com,, truenomads.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: